Wednesday, August 17, 2022

Latest Posts

ಮಂಜೇಶ್ವರ|ವಿದ್ಯುತ್ ಬಿಲ್ ಭಾರೀ ಏರಿಕೆ: ಬಿಜೆಪಿ ನಿಯೋಗದಿಂದ ಅಧಿಕಾರಿಗಳ ಭೇಟಿ!

ಕಾಸರಗೋಡು: ವಿದ್ಯುತ್ ಬಿಲ್ ಅನಿಮಿಯತವಾಗಿ ಏರಿಕೆ ಮಾಡಿರುವ ಕೆಎಸ್ ಇಬಿಯ ಜನದ್ರೋಹ ನೀತಿಯನ್ನು ಖಂಡಿಸಿ ಬಿಜೆಪಿ ಮಂಜೇಶ್ವರ ಮತ್ತು ಮೀಂಜ ಪಂಚಾಯತ್ ಸಮಿತಿಗಳ ನಿಯೋಗವು ಮಂಜೇಶ್ವರ ಕೆಎಸ್ ಇಬಿ ಕಚೇರಿಯಲ್ಲಿ ಅಸಿಸ್ಟೆಂಟ್ ಎಂಜಿನಿಯರನ್ನು ಗುರುವಾರ ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಪರಿಹಾರ ಪ್ರಯತ್ನ ಮಾಡಿತು.
ಅದರಂತೆ ಕರೆಂಟ್ ಬಿಲ್ ಪಾವತಿಗೆ ಕಂತುಗಳ ಅವಕಾಶಕ್ಕಾಗಿ ಬಿಜೆಪಿ ಬೇಡಿಕೆ ಇಟ್ಟ ಪರಿಣಾಮ ಅದಕ್ಕೆ ಕೆಎಸ್ಇಬಿ ಅಧಿಕಾರಿಗಳು ಸಮ್ಮತಿಸಿದರು.
ಬಿಜೆಪಿ ಮುಖಂಡರಾದ ಪದ್ಮನಾಭ ಕಡಪ್ಪರ, ವಕೀಲ ನವೀನ್ ರಾಜ್ ಕೆ.ಜೆ., ಆದರ್ಶ್ ಬಿ.ಎಂ., ಯಾದವ ಬಡಾಜೆ, ಎಂ.ಹರಿಶ್ಚಂದ್ರ ಮಂಜೇಶ್ವರ, ಕೃಷ್ಣ ಬೆಜ್ಜ, ಅವಿನಾಶ್ ಹೆಗ್ಡೆ , ದೇವರಾಜ್ ಎಂ.ಎಸ್., ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!