Friday, July 1, 2022

Latest Posts

ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್-2020 ಮುದ್ದು ಮಕ್ಕಳ ಫೋಟೋ ಸ್ಪರ್ಧೆ

ಕಾಸರಗೋಡು: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ಆಶ್ರಯದಲ್ಲಿ ರಾಷ್ಟ್ರೀಯ ಮಕ್ಕಳ ದಿನಾಚರಣೆಯ ಅಂಗವಾಗಿ ತುಳುನಾಡ ಮಕ್ಕಳ ಹಬ್ಬ ದೀಪಾವಳಿಯ ಪ್ರಯುಕ್ತ ತುಳುನಾಡ ಬಾಲೆ ಬಂಗಾರ್ – 2020 ಮುದ್ದು ಮಕ್ಕಳ ಫೋಟೋ ಸ್ಪರ್ಧೆ ಸೀಸನ್ 5 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಭಾವಚಿತ್ರವನ್ನು 6×9 ಸೈಜ್ ನಲ್ಲಿ ಒಂದು ಭಾವಚಿತ್ರವನ್ನು ಮಾತ್ರ ಕಳುಹಿಸಬೇಕು. ಭಾವಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಜನನ ಪ್ರಮಾಣ ಪತ್ರದ ಕರಡು ಪ್ರತಿ, ಪೋಷಕರ ಹೆಸರು, ವಿಳಾಸವನ್ನು ಸ್ಪಷ್ಟವಾಗಿ ಬರೆದಿರಬೇಕು. ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯ ಫೋಟೋಗಳಿಗೆ ಸ್ಪರ್ಧೆಯಲ್ಲಿ ಪ್ರಾಮುಖ್ಯತೆ ನೀಡಲಾಗುವುದು. ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳ ಮಕ್ಕಳು ಮಾತ್ರ ಸ್ಪರ್ಧೆಗೆ ಅರ್ಹರು.

ಫೋಟೋಗಳನ್ನು ಕೊರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಅಕ್ಟೋಬರ್ 31ರೊಳಗೆ ತಲುಪುವಂತೆ ಕಳುಹಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಅಬ್ಬಕ್ಕ ಟಿವಿ ನೇರ ಪ್ರಸಾರದ ಮೂಲಕ ತೀರ್ಪುಗಾರರು ಹಾಗೂ ಪ್ರಮುಖ ಅತಿಥಿ ಗಣ್ಯರ ಸಮ್ಮುಖದಲ್ಲಿ ತುಳುನಾಡ ಬಾಲೆ ಬಂಗಾರ್ – 2020 ಸ್ಪರ್ಧಾ ವಿಜೇತರ ಘೋಷಣೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಬಹುಮಾನವನ್ನು ನೇರ ಮನೆಗೆ ತಂದು ವಿತರಿಸಲಾಗುವುದು.

ಅಲ್ಲದೆ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣಪತ್ರವನ್ನು ವಾಟ್ಸಪ್ಪ್ ಅಥವಾ ಇಮೈಲ್ ಮೂಲಕ ಕಳುಹಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು, ಸಂಕಬೈಲು ಸತೀಶ್ ಅಡಪ, ಅಧ್ಯಕ್ಷರು, ತುಳುನಾಡ ಬಾಲೆ ಬಂಗಾರ್ ಸಮಿತಿ, ತುಳುವೆರೆ ಆಯನೊ ಕೂಟ ಮಂಜೇಶ್ವರ, ಅನುಗ್ರಹ ಇಂಡಸ್ಟ್ರಿಸ್ ಹೊಸಂಗಡಿ, ಮಂಜೇಶ್ವರ – 671323, ಕಾಸರಗೋಡು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗೆ 7034338773, 9746368580, 9447491189 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss