ಹೊಸ ದಿಗಂತ ಆನ್ ಲೈನ್ ಡೆಸ್ಕ್
ಸುಮಾರು 130 ಕೋಟಿ ರೂ. ಗಳಷ್ಟು ವಂಚನೆ ಪ್ರಕರಣ ಎದುರಿಸುತ್ತಿರುವ ಕಾಸಗೋಡು ಜಿಲ್ಲೆಯ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ. ಸಿ ಖಮರುದ್ದೀನ್ ಬಂಧನವಾಗಿದೆ. ಶನಿವಾರದಂದು ವಿಶೇಷ ಕಾಸರಗೋಡಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತನಿಖಾ ತಂಡ ವಿಚಾರಣೆ ನಡೆಸಿತ್ತು. ತನಿಖೆ ನೇತೃತ್ವವನ್ನು ಪಿ. ವಿವೇಕ್ ಕುಮಾರ್ ವಹಿಸಿಗೊಂಡಿದ್ದಾರೆ. ಶಾಸಕರಿಂದ ತನಿಖಾ ತಂಡವು ಮಹತ್ವದ ಮಾಹಿತಿಗಳು ಕಲೆಹಾಕಿದ್ದು, ತನಿಖೆ ಪೂರ್ಣಗೊಂಡ ಬಳಿಕ ಖಮರುದ್ದೀನ್ ನನ್ನು ಬಂಧಿಸಿದ್ದಾರೆ.