Thursday, June 30, 2022

Latest Posts

ಮಂಜೇಶ್ವರ ಶಾಸಕರ ರಾಜೀನಾಮೆಗೆ ಆಗ್ರಹಿಸಿ ಕರಿ ಪತಾಕೆ ಪ್ರದರ್ಶನ: ಬಿಜೆಪಿ ನೇತಾರರ ಬಂಧನ, ಬಿಡುಗಡೆ

ಕುಂಬಳೆ: ಜ್ಯುವೆಲ್ಲರಿ ಸಂಸ್ಥೆಯ ಹೂಡಿಕೆಗೆ ಸಂಬಂಧಿಸಿ ವಂಚನೆ ಆರೋಪ ಎದುರಿಸುತ್ತಿರುವ ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನಾಯಕ ಎಂ.ಸಿ.ಖಮರುದ್ದೀನ್ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಯುವಮೋರ್ಚಾ ಕಾರ್ಯಕರ್ತರು ಪೆರ್ಲದಲ್ಲಿ ಶನಿವಾರ ಶಾಸಕರಿಗೆ ಕರಿ ಪತಾಕೆ ತೋರಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್.ಭಟ್ ಸೇರಿದಂತೆ ಬಿಜೆಪಿ ಜನಪ್ರತಿನಿಧಿಗಳನ್ನು ಪೊಲೀಸರು ಬಂಧಿಸಿದರು.

ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಶನಿವಾರ ಮಧ್ಯಾಹ್ನ ಟಿ.ವಿ. ವಿತರಣೆ ಕಾರ್ಯಕ್ರಮಕ್ಕೆ ಎಣ್ಮಕಜೆ ಗ್ರಾಮ ಪಂಚಾಯತ್
ಕಚೇರಿಗೆ ಆಗಮಿಸಿದಾಗ ಬಿಜೆಪಿ ನೇತಾರರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಪ್ರಬಲ ಘೋಷಣೆ ಕೂಗಿದರು.
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್.ಭಟ್ ಅಲ್ಲದೆ ಪಕ್ಷದ ಎಣ್ಮಕಜೆ ಪಂಚಾಯತ್ ಸಮಿತಿಯ ಅಧ್ಯಕ್ಷ ಉದಯ ಚೆಟ್ಟಿಯಾರ್, ಜನಪ್ರತಿನಿಧಿಗಳಾದ ಪುಟ್ಟಪ್ಪ ಖಂಡಿಗೆ, ಸತೀಶ್ ಕುಲಾಲ್, ಮಲ್ಲಿಕಾ ರೈ , ಮಮತಾ ರೈ ಮೊದಲಾದವರನ್ನು ಬದಿಯಡ್ಕ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss