Monday, August 8, 2022

Latest Posts

ಮಂಜೇಶ್ವರ ಶಾಸಕ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪೈವಳಿಕೆಯಲ್ಲಿ ಎಡರಂಗ ಧರಣಿ

ಕಾಸರಗೋಡು: ವಕ್ಫ್ ಭೂಮಿ, ಜ್ಯುವೆಲ್ಲರಿ ವಂಚನೆ ಮುಂತಾದ ಹಗರಣಗಳ ಸರದಾರನಾದ ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನಾಯಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಎಡರಂಗದ ನೇತೃತ್ವದಲ್ಲಿ ಜನಪರ ವಿಚಾರಣಾ ಸಭೆಯು ಬುಧವಾರ ಪೈವಳಿಕೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆ ಜರಗಿತು.
ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ಪುರುಷೋತ್ತಮ ಬಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್.ಜಯಾನಂದ, ಸಿಪಿಐ ನೇತಾರ ಅಜಿತ್ ಎಂ.ಸಿ. ಲಾಲ್ ಬಾಗ್, ಎಡರಂಗದ ಮುಖಂಡರಾದ ಸದಾನಂದ ಕೋರಿಕ್ಕಾರು, ಚಂದ್ರ ನಾಯ್ಕ್ ಮಾಣಿಪ್ಪಾಡಿ, ಲಾರೆನ್ಸ್ ಮೊದಲಾದವರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss