ಮಂಡ್ಯ: ಜಿಲ್ಲೆಯಲ್ಲಿ ಗುರುವಾರ 195 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದರೆ, 314 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ.
ಮಂಡ್ಯ 56, ಮದ್ದೂರು 36, ಮಳವಳ್ಳಿ 30, ಪಾಂಡವಪುರ 12, ಶ್ರೀರಂಗಪಟ್ಟಣ 8, ಕೆ.ಆರ್.ಪೇಟೆ 59 ಹಾಗೂ ನಾಗಮಂಗಲದ 8 ಮಂದಿಗೆ ಸೋಂಕು ದೃಢಪಟ್ಟಿದೆ
ಇಂದು ಒಂದೇ ದಿನ 314 ಮಂದಿಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಂಡ್ಯ 57, ಮದ್ದೂರು 33, ಮಳವಳ್ಳಿ 26, ಪಾಂಡವಪುರ 32, ಶ್ರೀರಂಗಪಟ್ಟಣ 12, ಕೆ.ಆರ್.ಪೇಟೆ 148, ನಾಗಮಂಗಲ 4 ಹಾಗೂ ಹೊರ ಜಿಲ್ಲೆಯ 2 ಇಬ್ಬರು ಸೇರಿದ್ದಾರೆ. ಈವರೆಗೆ 8471 ಪ್ರಕರಣಗಳು ಬಿಡುಗಡೆಯಾಗಿದ್ದು, 1219 ಸಕ್ರಿಯ ಪ್ರಕರಣಗಳಿವೆ.
ಸರ್ಕಾರಿ ಆಸ್ಪತ್ರೆಗಳ ಐಸೋಲೇಷನ್ನಲ್ಲಿ 401, ಖಾಸಗಿ ಆಸ್ಪತ್ರೆಗಳಲ್ಲಿ 90, ಕೋವಿಡ್ ಕೇರ್ ಸೆಂಟರ್ನಲ್ಲಿ 71 ಹಾಗೂ ಹೋಂ ಐಸೋಲೇಷನ್ನಲ್ಲಿ 657 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದ್ದೂರು ತಾಲ್ಲೂಕಿನ 63 ವರ್ಷದ ವೃದ್ಧರೊಬ್ಬರು ಕೋವಿಡ್, ನ್ಯುಮೋನಿಯಾ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 97ಕ್ಕೇರಿದೆ.