ಮಂಡ್ಯ : ಮಂಡ್ಯದಲ್ಲಿ ಭಾನುವಾರ 179 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 116 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮಂಡ್ಯ ತಾಲೂಕಿನ 49, ಮದ್ದೂರು 25, ಮಳವಳ್ಳಿ 9, ಪಾಂಡವಪುರ 42, ಶ್ರೀರಂಗಪಟ್ಟಣ 26, ಕೆ.ಆರ್. ಪೇಟೆ 21, ನಾಗಮಂಗಲ 7 ಸೋಂಕು ಪ್ರಕರಣ ದೃಢಪಟ್ಟಿವೆ.
ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಮದ್ದೂರು ಆತಲೂಕು ಹಾಗೂ ಕೆ.ಆರ್. ಪೇಟೆಯ ತಲಾ ಒಬ್ಬರು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
116 ಮಂದಿ ಗುಣಮುಖ :
ಮಂಡ್ಯ ಜಿಲ್ಲೆಯಲ್ಲಿ ಇಂದು 116 ಮಂದಿ ಗುಣಮುಖರಾಗಿದ್ದು, ಈ ಪೈಕಿ ಮಂಡ್ಯ ತಾಲೂಕಿನಲ್ಲಿ ಒಬ್ಬರು, ಮದ್ದೂರಿನಲ್ಲಿ 99, ಮಳವಳ್ಳಿಯಲ್ಲಿ 1, ಪಾಂಡವಪುರ 5, ಶ್ರೀರಂಗಪಟ್ಟಣ2, ಕೆ.ಆರ್.ಪೇಟೆ 8 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 5268 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 3680 ಮಂದಿ ಗುಣಮುಖರಾಗಿದ್ದಾರೆ. 1547 ಸಕ್ರಿಯ ಪ್ರಕರಣಗಳಿವೆ. 693 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 335 ಮಂದಿ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾಗಿದ್ದಾರೆ. 519 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೋನಾ ಸೋಂಕಿನಿಂದ ವೃದ್ಧೆ ಸಾವು
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಿ.ಬಿ. ಪ್ರವೀಣ್ಕುಮಾರ್ ಅವರ ಮಾತೃಶ್ರೀ ತಾಲೂಕಿನ ಗೋಪಾಲಪುರ ಗ್ರಾಮದ ಲೇ. ಬೋರೇಗೌಡರ ಪತ್ನಿ ಚಿಕ್ಕತಾಯಮ್ಮ (68) ಅವರು ಕೊರೋನಾ ಸೋಂಕಿನಿಂದ ಭಾನುವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಿಕ್ಕತಾಯಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃಪಟ್ಟಿದ್ದು, ವಾಣಿಜ್ಯ ತೆರಿಗೆ ಅಧಿಕಾರಿ ಡಾ. ಜಿ.ಬಿ. ರವಿಶಂಕರ್, ವಕೀಲರಾದ ಜಿ.ಬಿ. ಪ್ರಶೀಲ ಸೇರಿದಂತೆ ನಾಲ್ಕು ಮಂದಿ ಮಕ್ಕಳು ಇದ್ದಾರೆ.
ತಾಲೂಕಿನ ಗೋಪಾಲಪುರ ಗ್ರಾಮದ ಅವರ ತೋಟದಲ್ಲಿ ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ನಡೆಯಿತು.