Tuesday, June 28, 2022

Latest Posts

ಮಂಡ್ಯದಲ್ಲಿ ಮತ್ತೆ ಎರಡು ಪಾಸಿಟಿವ್: 14 ಸೋಂಕಿತರಲ್ಲಿ 13 ಮಂದಿ ಮಳವಳ್ಳಿ ಮೂಲದವರು!

ಮಂಡ್ಯ: ಮಳವಳ್ಳಿ ಮೂಲದ ಇಬ್ಬರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 14 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರಲ್ಲಿ 13 ಮಂದಿ ಮಳವಳ್ಳಿಯವರಾಗಿದ್ದು, ಜಿಲ್ಲೆಯಲ್ಲಿ ಕೊರೋನಾ ಭೀತಿ ಹೆಚ್ಚಾಗಿದೆ.

ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಇಬ್ಬರು ಮಂದಿಗೆ ಸೋಂಕು ದೃಢಪಟ್ಟಿರುವುದು ವರದಿಯಾಗಿದ್ದು, ಪಿ.442, ಪಿ.443ರ ಪೇಸೆಂಟ್ ಗಳಿಗೆ ಸೋಂಕು ದೃಢಪಟ್ಟಿದೆ.

ಪಿ.171 ಮತ್ತು ಪಿ.371ರ ಸಂಪರ್ಕದಲ್ಲಿದ್ದ 47 ವರ್ಷದ ಪುರುಷ ಹಾಗೂ ಪಿ.179ರ ಸಂಪರ್ಕದಲ್ಲಿದ್ದ 28 ವರ್ಷದ ಮಹಿಳೆಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss