Saturday, August 13, 2022

Latest Posts

ಮಂಡ್ಯದಲ್ಲಿ ಸೋಮವಾರ 84 ಪ್ರಕರಣ ಪತ್ತೆ, 87 ಮಂದಿ ಬಿಡುಗಡೆ

ಮಂಡ್ಯ :   ಸೋಮವಾರ 84 ಪ್ರಕರಣ ಪತ್ತೆಯಾಗಿದ್ದು, ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ. 87 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮಂಡ್ಯ ತಾಲೂಕಿನಲ್ಲಿ 30, ಮದ್ದೂರಿನಲ್ಲಿ 20. ಮಳವಳ್ಳಿಯಲ್ಲಿ 9, ಪಾಂಡವಪುರದಲ್ಲಿ 8, ಶ್ರೀರಂಗಪಟ್ಟಣದಲ್ಲಿ 5, ಕೆ.ಆರ್. ಪೇಟೆಯಲ್ಲಿ 3 ಹಾಗೂ ನಾಗಮಂಗಲ ತಾಲೂಕಿನಲ್ಲಿ 9 ಪ್ರಕರಣ ಪತ್ತೆಯಾಗಿವೆ.
ನಾಗಮಂಗಲ ತಾಲೂಕಿನ ವ್ಯಕ್ತಿಯೊಬ್ಬರು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ನಿಮನಿಯಾ, ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.
ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 87 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮಂಡ್ಯ ತಾಲೂಕಿನ 20, ಮದ್ದೂರು 20, ಪಾಂಡವಪುರ 11, ಶ್ರೀರಂಗಪಟ್ಟಣ 3, ಕೆ.ಆರ್. ಪೇಟೆ 19, ನಾಗಮಂಗಲ 14 ಮಂದಿ ಗುಣಮುಖರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss