ಹೊಸದಿಗಂತ ವರದಿ, ಮಂಡ್ಯ
ನಿವಾರ್ ಚಂಡಮಾರುತದದಾಗಿ ಮಂಡ್ಯ ಜಿಲ್ಲೆಯಲ್ಲೂ ಮೋಡ ಮುಸುಕಿನ ವಾತಾವರಣ ಹಾಗೂ ಆಗಾಗ್ಗೆ ಸೋನೆ ಮಳೆ ಪ್ರಾರಂಭವಾಗಿದೆ.
ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ವೇಳೆ ಮಳೆ ಬಿದ್ದಿದೆ. ಗುರುವಾರ ಸಹ ಮುಂಜಾನೆ ಯಿಂದಲೂ ಸೋನೆ ಮಳೆ ಸುರಿಯುತ್ತಿದ್ದು, ಜನತೆ ಮಳೆಯ ನಡುವೆ ಎಂದಿನ ಕೆಲಸ ಕಾರ್ಯದಲ್ಲಿ ತೊಡಗಿದ್ದು ಕಂಡುಬಂದಿದೆ.