Wednesday, August 10, 2022

Latest Posts

ಮಂಡ್ಯ| ಅಚ್ಚರಿಯ ಬೆಳವಣಿಗೆಯಲ್ಲಿ ಜಿ.ಪಂ.ಅಧ್ಯಕ್ಷರ ಬದಲಾವಣೆ: ಸಿ. ಅಶೋಕ್ ಅಧಿಕಾರ

ಮಂಡ್ಯ : ಜಿಲ್ಲಾ ಪಂಚಾಯಿತಿಯೊಳಗೆ ಶನಿವಾರ ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜಿಪಂ ಪ್ರಭಾರ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯ ಸ್ಥಾಮಿತಿ ಅಧ್ಯಕ್ಷ ಸಿ.ಅಶೋಕ್ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ರಾಜಕೀಯ ಇತಿಹಾಸದಲ್ಲಿ ಇದು ಮೊದಲ ಬೆಳವಣಿಗೆಯಾಗಿದೆ.
ಕಳೆದೊಂದು ವರ್ಷದಿಂದ ರಾಜೀನಾಮೆ ವಿಚಾರವಾಗಿ ಆಡಳಿತಾರೂಢ ಜೆಡಿಎಸ್ ಅಧ್ಯಕ್ಷೆ-ಸದಸ್ಯರ ನಡುವೆ ತೀವ್ರ ತಿಕ್ಕಾಟ ಏರ್ಪಟ್ಟಿತ್ತು. ವರಿಷ್ಠರ ಮಾತಿಗೂ ಸೊಪ್ಪುಹಾಕದೆ ನಾಗರತ್ನಸ್ವಾಮಿ ಅಧಿಕಾರದಲ್ಲಿ ಮುಂದುವರೆದುಕೊಂಡು ಬಂದಿದ್ದರು.
ಅಧ್ಯಕ್ಷೆ ನಾಗರತ್ನಸ್ವಾಮಿ ವಿರುದ್ಧವೇ ಸಿಡಿದೆದ್ದ ಗುಂಪು ಅಧ್ಯಕ್ಷೆ-ಉಪಾಧ್ಯಕ್ಷರ ಅವಧಿ ಕಾನೂನು ಪ್ರಕಾರ ಪೂರ್ಣಗೊಂಡಿರುವುದರಿಂದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಆ ಕರ್ತವ್ಯಗಳನ್ನು ಪೂರೈಸಲು ಕಾನೂನಿನಡಿ ಅವಕಾಶವಿರುವುದನ್ನು ಮನಗಂಡು ಜಿಲ್ಲಾಧಿಕಾರಿ ಮುಖೇನ ಸಿಇಓಗೆ ಪತ್ರ ರವಾನಿಸುವಂತೆ ಮಾಡಿ ಪ್ರಭಾರ ಅಧ್ಯಕ್ಷ ಗದ್ದುಗೆ ಅಲಂಕರಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ರಾಜ್ ಅಧಿನಿಯಮ-1993 ನಿಯಮ 177ರಂತೆ ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಅವýಯನ್ನು 5 ವರ್ಷಗಳಿಂದ 30 ತಿಂಗಳಿಗೆ ಪ್ರತಿಯೋಜಿಸಿರುವುದರಿಂದ ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕರ್ತವ್ಯಗಳನ್ನು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ನಿರ್ವಹಿಸಲು ಅವಕಾಶವಿರುವುದರಿಂದ ಸಿ.ಅಶೋಕ್ ನೀಡಿರುವ ಮನವಿಯನ್ನು ಲಗತ್ತಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ನಿಯಮಗಳನ್ವಯ ಕ್ರಮ ವಹಿಸುವಂತೆ ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುಲ್‍ಫಿಖಾರ್ ಉಲ್ಲಾ ಅವರಿಗೆ ಶುಕ್ರವಾರವಷ್ಟೇ ಪತ್ರ ಬರೆದಿದ್ದರು.
ಈ ಪತ್ರವನ್ನು ಆಧರಿಸಿ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು, ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಸೇರಿದಂತೆ ಅಧ್ಯಕ್ಷೆ ವಿರೋಧಿ ಗುಂಪಿನ ಸದಸ್ಯರು ಶನಿವಾರ ಸಿಇಒ ಜುಲ್‍ಫಿಖಾರ್ ಉಲ್ಲಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಮುಗಿದಿರುವುದರಿಂದ ನಿಯಮಾನುಸಾರ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಅýಕಾರ ವಹಿಸಿಕೊಳ್ಳಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಇದರಿಂದ ಸಿಇಒ ಯಾವುದೇ ತೀರ್ಮಾನಕ್ಕೂ ಬರಲಾಗದೆ ಗೊಂದಲಕ್ಕೆ ಒಳಗಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss