Saturday, June 25, 2022

Latest Posts

ಮಂಡ್ಯ| ಆತಂಕ ಮೂಡಿಸಿದ ಒಂದೇ ಕುಟುಂಬಕ್ಕೆ ಸೇರಿದ 19 ರಾಸುಗಳ ನಿಗೂಢ ಸಾವು

ಮಂಡ್ಯ: ತಾಲೂಕಿನ ಕೀಲಾರ ಗ್ರಾಮದಲ್ಲಿ ಒಂದೇ ಕುಟುಂಬಕ್ಕೆ ಸೇರಿದ 19 ರಾಸುಗಳು ನಿಗೂಢವಾಗಿ ಸಾವನ್ನಪ್ಪಿರುವುದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.
ಕೀಲಾರ ಗ್ರಾಮದ ಕೆ.ಎಂ.ಶoಕರೇಗೌಡ, ಶ್ರುತಿ, ಕೆ.ಸಿ.ಸಿದ್ದರಾಮೇಗೌಡ, ಪ್ರೇಮಾ ಎಂಬುವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಇವರು ಸಾಕಿದ್ದ ಮಿಶ್ರತಳಿ ಹಸು (ಹೆಚ್‌ಎಫ್), ಹಳ್ಳಿಕಾರ್, ಮೇಕೆಗಳು ಕೆಲವೇ ದಿನಗಳ ಅಂತರದಲ್ಲಿ ಮೃತಪಟ್ಟಿರುವುದು ಅಚ್ಚರಿ ಮೂಡಿಸಿದೆ.
ಕುಟುಂಬದವರು ಹೇಳುವ ಪ್ರಕಾರ ಸುಮಾರು 19 ರಾಸುಗಳು ಜೊತೆಗೆ ಹಲವಾರು ಕುರಿ, ಮೇಕೆಗಳು ಕೆಲವೇ ದಿನಗಳಲ್ಲಿ ಸಾವನ್ನಪ್ಪಿವೆ. ಸಾವಿಗೆ ನಿಖರ ಕಾರಣವೇನೆಂಬುದು ಈವರೆಗೂ ತಿಳಿದುಬಂದಿಲ್ಲ. ಆದರೆ, ಪಶು ವೈದ್ಯಕೀಯ ಇಲಾಖೆ ನಡೆಸಿದ ೮ ಹಸುಗಳು ಹಾಗೂ ೧ ಮೇಕೆಯ ಶವಪರೀಕ್ಷಾ ವರದಿಯಲ್ಲಿ ಹಸುಗಳ ಹಠಾತ್ ಸಾವಿಗೆ ಟಾಕ್ಷಿಮಿಯಾ ಕಾರಣವೆಂದು ತಿಳಿದುಬಂದಿರುವುದಾಗಿ ಹೇಳಿದ್ದಾರೆ. ಆದರೆ, ಒಂದೇ ಗ್ರಾಮದ ಹಾಗೂ ಒಂದೇ ಕುಟುಂಬಕ್ಕೆ ಸೇರಿದ ೯ ಜಾನುವಾರುಗಳಲ್ಲಿ ಮಾತ್ರ ಟ್ಯಾಕ್ಷಿಮಿಯಾ ಇರುವುದು ಶವಪರೀಕ್ಷಾ ವರದಿ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss