ಮಂಡ್ಯ: ನಗರ ಹಾಗೂ ಪಟ್ಟಣಕ್ಕೆ ಸೀಮಿತವಾಗಿದ್ದ ಕೊರೊನಾ ವೈರಸ್ ಈಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಮುಂಬೈನಿಂದ ಆಗಮಿಸಿದ್ದ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿ ಸಾತೇನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಮುಂಬೈ ಮೂಲದ 50 ವರ್ಷದ ವ್ಯಕ್ತಿಯೊಬ್ಬರು ಲಾಕ್ಡೌನ್ ಉಲ್ಲಂಸಿ ಅಗತ್ಯವಸ್ತುಗಳ ಸಾಗಣೆ ವಾಹನದ ಮೂಲಕ ಏ.22ರಂದು ಗ್ರಾಮವನ್ನು ತಲುಪಿದ್ದರು. ಬಳಿಕ ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಗಾಗಿದ್ದರಿಂದ ಅವರ ಗಂಟಲು ದ್ರವ, ರಕ್ತ ಪರೀಕ್ಷೆ ನಡೆಸಲಾಗಿ ಕೋವಿಡ್-19 ಇರುವುದು ಖಚಿತಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.