Wednesday, July 6, 2022

Latest Posts

ಮಂಡ್ಯ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆ ಸೇರಿ 12 ಮಂದಿಗೆ ಕೊರೋನಾ ದೃಢ

ಮಂಡ್ಯ: ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆ ಸೇರಿ ಒಟ್ಟು ೧೨ ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಎರಡು ಪ್ರಕರಣಗಳು ದೆಹಲಿ ರಾಜ್ಯದಿಂದ ಜಿಲ್ಲೆಯ ಮಳವಳ್ಳಿ ತಾಲೂಕಿಗೆ ಬಂದಿರುವ ಪ್ರಕರಣವಾಗಿವೆ. ಎರಡು ಪ್ರಕರಣ ಬೆಂಗಳೂರಿನಿಂದ ಮಳವಳ್ಳಿ ತಾಲ್ಲೂಕಿಗೆ, ಒಂದು ಪ್ರಕರಣ ರಾಮನಗರ ಜಿಲ್ಲೆಯಿಂದ ಮಳವಳ್ಳಿ ತಾಲ್ಲೂಕಿಗೆ, ಮೂರು ಪ್ರಕರಣ ಬೆಂಗಳೂರು ಜಿಲ್ಲೆಯಿಂದ ಮಂಡ್ಯ ತಾಲ್ಲೂಕಿಗೆ, ಎರಡು ಪ್ರಕರಣ 10142 ಪ್ರಕರಣದ ಪ್ರಥಮ ಸಂಪರ್ಕಿತ ವ್ಯಕ್ತಿಯಾಗಿದ್ದು, ಸದರಿ ಪ್ರಕರಣವು ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕಿನಲ್ಲಿ ವರದಿ ಆಗಿರುತ್ತವೆ. ಒಂದು ಪ್ರಕರಣವು 10141 ಪ್ರಕರಣದ ಪ್ರಥಮ ಸಂಪರ್ಕಿತ ವ್ಯಕ್ತಿಯಾಗಿದ್ದು, ಸದರಿ ಪ್ರಕರಣವು ಮದ್ದೂರಿನಿಂದ ವರದಿಯಾಗಿರುತ್ತದೆ. ಮತ್ತೊಂದು ಪ್ರಕರಣವೂ 10 143 ಪ್ರಕರಣದ ಪ್ರಥಮ ಸಂಪರ್ಕಿತ ವ್ಯಕ್ತಿಯಾಗಿದ್ದು, ಸದರಿ ಪ್ರಕರಣವು ಪಾಂಡವಪುರ ತಾಲ್ಲೂಕಿನಿಂದ ವರದಿಯಾಗಿರುತ್ತದೆ.
ನಾಲ್ವರು ಬಿಡುಗಡೆ:
ಭಾನುವಾರ ನಾಲ್ಕು ಮಂದಿ ಕೊರೊನಾದಿಂದ ಮುಕ್ತರಾಗಿ ಮಿಮ್ಸ್ ನ ಕೋವಿಡ್ ಕೇಂದ್ರದಿಂದ ಬಿಡುಗಡೆಯಾಗಿದ್ದಾರೆ. ನಾಗಮಂಗಲ ತಾಲ್ಲೂಕಿನ- ಮೂವರು, ಕೆಆರ್ ಪೇಟೆ ತಾಲ್ಲೂಕಿನ ಒಬ್ಬ ರೋಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಭಾನುವಾರದವರೆಗೆ 400 ಕೊರೊನಾ ರೋಗ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 338 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 61 ಪ್ರಕರಣಗಳು ಸಕ್ರಿಯವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss