Saturday, August 13, 2022

Latest Posts

ಮಂಡ್ಯ ಜಿಲ್ಲೆಯಲ್ಲಿ ಮಂಗಳವಾರ 125 ಪ್ರಕರಣಗಳು ಪತ್ತೆ , 2 ಸಾವಿರ ದಾಟಿದ ಸೋಂಕಿತರು

ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರುಮುಖವಾಗಿಯೇ ಸಾಗುತ್ತಿದ್ದು, ಮಂಗಳವಾರ 125 ಪ್ರಕರಣಗಳು ದಾಖಲಾಗುವ ಮೂಲಕ 2035ಕ್ಕೆ ಏರಿಕೆಯಾಗಿದೆ. ಜೊತೆಗೆ ಇಬ್ಬರು ಸಾವನ್ನಪ್ಪಿದ್ದು,
16 ಮಂದಿ ಮೃತಪಟ್ಟಿದ್ದಾರೆ.
ಮಂಡ್ಯ ತಾಲೂಕಿನಲ್ಲಿ 68 ಮಂದಿ ಸೋಂಕಿತರಿದ್ದು, ಈ ಪೈಕಿ 44 ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಮತ್ತು 24 ಮಂದಿಗೆ ಐಎಲ್‍ಎ ಪ್ರಕರಣಗಳು ಕಂಡುಬಂದಿದೆ. ಮದ್ದೂರು ತಾಲೂಕಿನಲ್ಲಿ 10 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಈ ಪೈಕಿ 7 ಪ್ರಾಥಮಿಕ ಸಂಪರ್ಕ ಹಾಗೂ ಮೂವರು ಜ್ವರದಿಂದ ಬಳಲುತ್ತಿರುವವರಿಗೆ ಸೋಂಕು ಕಾಣಿಸಿಕೊಂಡಿದೆ.
ಮಳವಳ್ಳಿ ತಾಲೂಕಿನಲ್ಲಿ 15 ಮಂದಿ ಸೋಂಕಿತರು ದೃಢಪಟ್ಟಿದ್ದು, ಈ ಪೈಕಿ 11 ಮಂದಿ ಪ್ರಾಥಮಿಕ ಸಂಪರ್ಕದಿಂದಲೂ, ನಾಲ್ವರು ಜ್ವರದಿಂದ ಬಳಲುತ್ತಿರುವವರಲ್ಲಿ ಸೋಂಕು ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 16 ಮಂದಿಗೆ ಕಾಣಿಸಿಕೊಂಡಿದ್ದು, ಈ ಪೈಕಿ 13 ಮಂದಿಗೆ ಪ್ರಾಥಮಿಕ ಸಂಪರ್ಕದಿಂದಲೂ ಹಾಗೂ 3 ಮಂದಿ ಜ್ವರದಿಂದ ಸೋಂಕು ದೃಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss