Thursday, August 11, 2022

Latest Posts

ಮಂಡ್ಯ ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಆರ್ಭಟ: ಗುರುವಾರವೂ 15 ಜನರಲ್ಲಿ ಸೋಂಕು!

ಮಂಡ್ಯ: ಕೊರೊನಾ ಆರ್ಭಟ ಜಿಲ್ಲೆಯಲ್ಲಿ ಮುಂದುವರೆದಿದೆ. ಗುರುವಾರವೂ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 183ಕ್ಕೇರಿದೆ.
ಕೆ.ಆರ್.ಪೇಟೆ-12, ನಾಗಮಂಗಲ, ಮಳವಳ್ಳಿ ಹಾಗೂ ಪಾಂಡವಪುರ ತಾಲೂಕಿನಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ. 7 ವರ್ಷದಿಂದ 53 ವರ್ಷದವರೆಗಿನ ವ್ಯಕ್ತಿಗಳಿಗೆ ಸೋಂಕು ವ್ಯಾಪಿಸಿದೆ. 8 ಮಂದಿ ಪುರುಷರು, 4 ಮಂದಿ ಮಹಿಳೆಯರು, ಇಬ್ಬರು ಬಾಲಕರು ಹಾಗೂ ಮತ್ತೊಬ್ಬ ಬಾಲಕಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಪಿ-1468, ಪಿ-1469, ಪಿ-1470, ಪಿ-1472, ಪಿ-1473, ಪಿ-1474, ಪಿ-1475, ಪಿ-1554, ಪಿ-1555, ಪಿ-1556, ಪಿ-1557 ಸೋಂಕಿತ 11 ಮಂದಿ ಮುಂಬೈನಿಂದ ಬಂದವರಾಗಿದ್ದಾರೆ, ಪಿ-1467, ಪಿ-1486, ಪಿ-1487 ಸೋಂಕಿತರಿಗೆ ಪಿ-869ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದ್ದು, ಪಿ-1471 ಸೋಂಕಿತ 34 ವರ್ಷದವನಾಗಿದ್ದು, ಅವರಿಗೆ ಪಿ-171ರ ಸೋಂಕಿತ ಹಾಗೂ ಇತರೆ ಎರಡನೇ ಸಂಪರ್ಕದಿಂದ ಸೋಂಕು ಹರಡಿರಬಹುದು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss