Wednesday, August 17, 2022

Latest Posts

ಮಂಡ್ಯ ಜಿಲ್ಲೆಯಲ್ಲಿ 88 ಮಂದಿಗೆ ಗುರುವಾರ ಕೊರೋನಾ ಪಾಸಿಟಿವ್ ದೃಢ, 50 ಮಂದಿ ಗುಣಮುಖ

ಮಂಡ್ಯ: ಜಿಲ್ಲೆಯಲ್ಲಿ 88 ಮಂದಿಗೆ ಗುರುವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ 1501ಕ್ಕೇರಿದೆ. ಕೊರೋನಾದಿಂದ ಗುಣಮುಖರಾಗಿ 50 ಮಂದಿ ಬಿಡುಗಡೆಯಾಗಿದ್ದಾರೆ.
ಮಂಡ್ಯ ತಾಲ್ಲೂಕಿನಲ್ಲೇ 39 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 6 ಮಂದಿ ಬೆಂಗಳೂರು ಹಾಗೂ ರಾಮನಗರದಿಂದ ಬಂದಿದ್ದ ಒಬ್ಬ ಹಾಗೂ ಸೋಂಕಿತನ ಪ್ರಥಮ ಸಂಪರ್ಕದಿಂದ 17 ಮಂದಿಗೆ ಸೋಂಕು ತಗುಲಿದೆ. 15 ಮಂದಿ ಐಎಲ್‍ಐ ಪ್ರಕರಣಗಳಾಗಿವೆ.
ಮದ್ದೂರು ತಾಲ್ಲೂಕಿನಲ್ಲಿ 14 ಪ್ರಕರಣಗಳು ವರದಿಯಾಗಿದ್ದು, 4 ಮಂದಿಗೆ ಸೋಂಕಿತನಿಂದ ಹರಡಿದರೆ, 10 ಪ್ರಕರಣಗಳು ಐಎಲ್‍ಐ ಪ್ರಕರಣಗಳಾಗಿವೆ. 8 ಪ್ರಕರಣಗಳು ಮಳವಳ್ಳಿ ತಾಲ್ಲೂಕಿನಲ್ಲಿ ವರದಿಯಾಗಿದ್ದು, 6 ಮಂದಿಗೆ ಪ್ರಥಮ ಸಂಪರ್ಕ ಹಾಗೂ 2 ಪ್ರಕರಣಗಳು ಐಎಲ್‍ಐ ಪ್ರಕರಣಗಳಾಗಿವೆ. ಪಾಂಡವಪುರ 3 ಪ್ರಕರಣಗಳು ಐಎಲ್‍ಐ ಆಗಿದೆ. ಶ್ರೀರಂಗಪಟ್ಟಣದಲ್ಲಿ ಮೈಸೂರಿನಿಂದ ಬಂದಿದ್ದ ಓರ್ವನಿಗೆ, ಸೋಂಕಿತನಿಂದ 4 ಮಂದಿಗೆ ಹಾಗೂ 4 ಮಂದಿಗೆ ಐಎಲ್‍ಐ ಲಕ್ಷಣಗಳಿವೆ.
ನಾಗಮಂಗಲ ತಾಲ್ಲೂಕಿಗೆ ಬಿಜಾಪುರ ಹಾಗೂ ಬೆಂಗಳೂರಿನಿಂದ ಬಂದಿದ್ದ ತಲಾ ಒಬ್ಬರಿಗೆ, ಸೋಂಕಿತನ ಪ್ರಥಮ ಸಂಪರ್ಕದಿಂದ ಒಬ್ಬರಿಗೆ ಹಾಗೂ 8 ಮಂದಿಗೆ ಐಎಲ್‍ಐ ಇದೆ. ಕೆ.ಆರ್.ಪೇಟೆಯ 3 ಪ್ರಕರಣಗಳು ಐಎಲ್‍ಐ ಆಗಿದೆ. ಮೈಸೂರಿನ ಒಬ್ಬ ಸೋಂಕಿತ ಮಿಮ್ಸ್ ಕೋವಿಡ್ ವಾರ್ಡ್‍ನಲ್ಲಿ ದಾಖಲಾಗಿದ್ದಾರೆ.
50 ಮಂದಿ ಬಿಡುಗಡೆ 
ಗುರುವಾರ 50 ಮಂದಿ ಮಿಮ್ಸ್‍ನ ಕೋವಿಡ್ ವಾರ್ಡ್‍ನಿಂದ ಕೊರೋನಾ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಮಂಡ್ಯ 16, ಮಳವಳ್ಳಿ 12, ಮದ್ದೂರು 7, ಶ್ರೀರಂಗಪಟ್ಟಣ 5, ನಾಗಮಂಗಲ 4, ಪಾಂಡವಪುರ 2, ಕೆ.ಆರ್.ಪೇಟೆ 1 ಹಾಗೂ ರಾಮನಗರ ಜಿಲ್ಲೆಯ 3 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 916 ಮಂದಿ ಬಿಡುಗಡೆಯಾಗಿದ್ದು, 575 ಸಕ್ರಿಯ ಪ್ರಕರಣಗಳಿವೆ.
ಮಂಡ್ಯ ಮಿಮ್ಸ್‍ನ ಕೋವಿಡ್ ಐಸೋಲೇಷನ್ ವಾರ್ಡ್‍ನಲ್ಲಿ 237 ಮಂದಿ, ಮೈಸೂರು ಕೋವಿಡ್ ಆಸ್ಪತ್ರೆಯಲ್ಲಿ 1, ಜಿಲ್ಲಾ ಕೋವಿಡ್ ಕೇರ್ ಸೆಂಟರ್ ವಾರ್ಡ್‍ನಲ್ಲಿ 35, ತಾಲ್ಲೂಕಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ 284, ಖಾಸಗಿ ಆಸ್ಪತ್ರೆಯ ಐಸೋಲೇಷನ್‍ನಲ್ಲಿ 6, ಹೋಂ ಐಸೋಲೇಷನ್‍ನಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!