Sunday, August 14, 2022

Latest Posts

ಮಂಡ್ಯ| ಜಿ.ಪಂ. ಸ್ಥಾಯಿ ಸಮಿತಿಗಳಿಗೆ ಆ. 12ರಂದು ಚುನಾವಣೆ: ಎರಡೂ ಗುಂಪಿನಿಂದ ತಂತ್ರ-ಪ್ರತಿತಂತ್ರ

ಮಂಡ್ಯ: ಅವಧಿ ಪೂರ್ಣಗೊಂಡಿರುವ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳಿಗೆ ಆ.12ರಂದು ಚುನಾವಣೆ ನಡೆಯಲಿದೆ. ಗದ್ದುಗೆ ಹಿಡಿಯಲು ಆಡಳಿತಾರೂಢ ಜೆಡಿಎಸ್ ಪಕ್ಷದ ಅಧ್ಯಕ್ಷೆ ಮತ್ತು ಸದಸ್ಯರ ನಡುವೆಯೇ ಪ್ರತಿಷ್ಠೆಯ ಕದನ ಏರ್ಪಟ್ಟಿದೆ. ತೆರೆಮರೆಯಲ್ಲಿ ಗೆಲುವಿಗಾಗಿ ಎರಡೂ ಗುಂಪಿನವರು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಅಂತಿಮವಾಗಿ ಗೆಲುವು ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಕಳೆದ ಜು.10ರಂದು ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ, ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಅವರು ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಭೆ ಮುಂದೂಡಿದ್ದರು. ಒಪ್ಪಂದದಂತೆ ರಾಜೀನಾಮೆ ನೀಡದೆ ಪಕ್ಷದ ನಾಯಕರ ತೀರ್ಮಾನಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಸಾಮಾನ್ಯಸಭೆಗಳಿಗೆ ಗೈರು ಹಾಜರಾಗುವ ಮೂಲಕ ಕೋರಂ ಅಭಾವ ಸೃಷ್ಠಿಸಿ ಸಭೆಗಳು ನಡೆಯದಂತೆ ಅಡ್ಡಿಪಡಿಸುತ್ತಿದ್ದ ಜೆಡಿಎಸ್ ಸದಸ್ಯರಿಗೆ ಅಧ್ಯಕ್ಷೆ ನಾಗರತ್ನಸ್ವಾಮಿ ಚುನಾವಣಾ ಸಭೆ ಮುಂದೂಡುವ ಅಧಿಕಾರ ಚಲಾಯಿಸಿ ಸೇಡು ತೀರಿಸಿಕೊಂಡಿದ್ದರು.
ಇದೀಗ ಜು.12ಕ್ಕೆ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿಯಾಗಿದೆ. ಇದರ ಬೆನ್ನಲ್ಲೇ ಅಧ್ಯಕ್ಷೆ ಪಾಳಯ ಹಾಗೂ ವಿರೋಧಿ ಜೆಡಿಎಸ್ ಸದಸ್ಯರ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಸ್ಥಾಯಿ ಸಮಿತಿಗಳ ಗದ್ದುಗೆ ಹಿಡಿಯುವುದಕ್ಕೆ ಉಭಯ ಬಣದವರು ತೀವ್ರ ಸೆಣಸಾಟ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss