ಮಂಡ್ಯ: ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಹುಂಡಿಗೆ ಸಾರ್ವಜನಿಕರು ಹಣ ಹಾಕಬಾರದು. ಬದಲಿಗೆ ಬಡವರಿಗೆ ಸಹಾಯ ಮಾಡಿ ಎಂದು ಭಜರಂಗ ಸೇನೆಯ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಮನವಿ ಮಾಡಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಕಳ್ಳತನ ಹೆಚ್ಚುತ್ತಲೇ ಇವೆ. ಇದೀಗ ಕೊಲೆಯೂ ನಡೆದಿದೆ. ಇಲಾಖೆಯಿಂದ ಹುಂಡಿ ಹಣ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಖಜಾನೆಗೆ ಶೇ.40ರಷ್ಟು, ದೇವಾಲಯದ ಧಾರ್ಮಿಕ ಕಾರ್ಯಗಳಿಗೆ ಶೇ.1ರಷ್ಟು, ಶೇ.20 ರಿಂದ 35 ಇಲಾಖೆಯ ಸಿಬ್ಬಂದಿ ವೇತನಕ್ಕೆ ಸೇರುತ್ತದೆ ಎಂದು ತಿಳಿಸಿದರು.
ಎ ಗ್ರೇಡ್ ದೇವಾಲಯದ ಅರ್ಚಕರಿಗೆ ಎರಡು ಸಾವಿರ ರೂಪಾಯಿ, ಬಿ ಗ್ರೇಡ್ ದೆವಾಲಯದ ಅರ್ಚಕರಿಗೆ ಒಂದು ಸಾವಿರ ರೂ ವೇತನ ಕೊಡಲಾಗುತ್ತದೆ. ಆದರೆ ಸಾಕಷ್ಟು ಆದಾಯ ತರುವ ದೇವಾಲಯಗಳಲ್ಲಿ ಮೂಲ ಸೌಲಭ್ಯ ಕೊರತೆ ಇದೆ. ನಮ್ಮ ಹಿಂದುಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಈ ಹುಂಡಿಗಳಿಗೆ ಹಣ ಹಾಕುವುದನ್ನು ಬಿಟ್ಟು ಅದೇ ಹಣವನ್ನು ಬಡವರು, ನಿರ್ಗತಿಕರು, ಔಷಧ ವಿತರಣೆ ಹಾಗೂ ವಿದ್ಯಾದಾನಕ್ಕೆ ಹಿಂದೂ ಸಮಾಜದ ಪರವಾಗಿ ಬಳಸಿಕೊಳ್ಳಬೇಕು. ಆ ಮೂಲಕ ಹಿಂದೂ ಶಕ್ತಿ ತೋರಿಸಬೇಕು ಎಂದು ಸಲಹೆ ನೀಡಿದರು.
ಸೇನೆಯ ರಾಜ್ಯ ಕಾರ್ಯದರ್ಶಿ ನಾ.ಕ.ಕೃಷ್ಣ, ಜಿಲ್ಲಾಧ್ಯಕ್ಷ ಸುಂಡಹಳ್ಳಿ ಗಂಗಾಧರ್, ನಗರಾಧ್ಯP್ಷ ಆರ್.ಚೇತನ್ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವು, ಯತೀಶ್ ಹಾಜರಿದ್ದರು.