Wednesday, August 10, 2022

Latest Posts

ಮಂಡ್ಯ| ಧರೆಗುರುಳಿದ ಭಾರೀ ಗಾತ್ರದ ಮರ: ಕಾರು, ದ್ವಿಚಕ್ರ ವಾಹನಗಳ ಜಖಂ

ಮಂಡ್ಯ : ಭಾರೀ ಗಾತ್ರದ ಮರವೊಂದು ಆಕಸ್ಮಿಕವಾಗಿ ರಸ್ತೆಗೆ ಉರುಳಿಬಿದ್ದ ಪರಿಣಾಮ ಕಾರು ಹಾಗೂ ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ನಗರದ ಜನನಿಬಿಡ ಪ್ರದೇಶವಾಗಿರುವ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ವಿ.ವಿ. ರಸ್ತೆಯ ಪ್ರಧಾನ ಅಂಚೆ ಕಚೇರಿ ಸಮೀಪದಲ್ಲಿ ಬೆಳೆದುನಿಂತಿದ್ದ ಭಾರೀ ಗಾತ್ರದ ಬನ್ನಿ ಮರ ಧರೆಗೆ ಉರುಳಿಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ದಿಢೀರನೆ ಮರ ನೆಲಕ್ಕುರುಳಿದೆ. ಘಟನೆಯಿಂದಾಗಿ ಈ ರಸ್ತೆಯಲ್ಲಿ ಚಲಿಸುತ್ತಿದ್ದ ಮಾರುತಿ ಸ್ವಿಪ್ ಡಿಸೈರ್ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮರದ ರೆಂಬೆಯೊಂದು ನೆಲಕ್ಕ ಅಪ್ಪಳಿಸಿದ್ದರಿಂದಾಗಿ ಕಾರಿಗೆ ಹೆಚ್ಚು ಹಾನಿಯಾಗಿಲ್ಲ. ಒಂದು ವೇಳೆ ಮರದ ರೆಂಬ ನೆಲಕ್ಕೆ ತಡೆಯದಿದ್ದಲ್ಲಿ ಕಾರು ಸಂಪೂರ್ಣ ವಾಗಿ ನಜ್ಜುಗುಜ್ಜಾಗುವುದಲ್ಲದೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೂ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಳಿಯ ರಭಸಕ್ಕೆ ಮರ ಆಗಾಗ್ಗೆ ಅಲುಗಾಡುತ್ತಿತ್ತೆನ್ನಲಾಗಿದ್ದು, ಈ ಬಗ್ಗೆ ನಗರಸಭೆ ಅýಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ನಗರಸಭೆಯವರ ನಿರ್ಲಕ್ಷದಿಂದಾಗಿ ಇಂದು ರಸ್ತೆಗೆ ಉರುಳಿಬಿದ್ದಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ನಾಗರಕಟ್ಟೆ ಒತ್ತುವರಿ  
ಬನ್ನಿ ಮರ ಹಾಗೂ ಅರಳೀ ಮರದ ಸುತ್ತ ನಾಗರಕಟ್ಟೆ ನಿರ್ಮಿಸಲಾಗಿತ್ತು. ಕಳೆದ ಕೆಲ ವರ್ಷಗಳಿಂದ ಕೆಲವರು ಒತ್ತುವರಿ ಮಾಡಿಕೊಂಡು ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ. ಅಂಗಡಿ ಮಳಿಗೆಗಳ ನಿರ್ಮಾಣ ಸಂದರ್ಭದಲ್ಲಿ ಗುಡಿ ತೆಗೆದಿರುವುದರಿಂದ ಮರಗಳ ಸುತ್ತ ಮಣ್ಣು ಸಡಿಲವಾಗಿದೆ. ಇದರಿಂದಾಗಿ ಹಲವಾರು ವರ್ಷಗಳಿಂದ ಬೆಳೆದು ನಿಂತಿದ್ದ ಮರ ಒಮ್ಮೆಲೆ ಧರಗೆ ಉರುಳಿಬಿದ್ದಿದೆ. ಇದಕ್ಕೆ ಅýಕಾರಿಗಳ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss