Saturday, August 13, 2022

Latest Posts

ಮಂಡ್ಯ| ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಓಜೋನ್ ಪದರ ಕ್ಷೀಣ-ಆತಂಕ

ಮಂಡ್ಯ : ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಓಜೋನ್ ಪದರ ಕ್ಷೀಣಿಸುತ್ತಿದೆ. ಇದನ್ನು ತಡೆಯುವಲ್ಲಿ ಎಲ್ಲರ ಪಾತ್ರ ಮುಖ್ಯ ಎಂದು ಕೃಷಿಕ್ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ. ಹನುಮಂತು ತಿಳಿಸಿದರು.
ನಗರದ ಕಾಳೇಗೌಡ ಪ್ರೌಢಶಾಲೆಯಲ್ಲಿ ಕೃಷಿಕ್ ಲಯನ್ಸ್ ಸಂಸ್ಥೆ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ವಿಶ್ವ ಓಜೋನ್ ದಿನಾಚರಣೆ ಅಂಗವಾಗಿ ಪ್ರಾತ್ಯಕ್ಷಿತೆ, ಉಪನ್ಯಾಸ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಲೂರೋಫೆÇ್ರೀ ಕಾರ್ಬನ್ ಹವಾ ನಿಯಂತ್ರಿತ ವಸ್ತುಗಳ ಬಳಕೆಯಿಂದ ಓಜೋನ್ ಪದರ ನಾಶವಾಗುತ್ತಿದೆ. ಸಾಧಾರಣವಾಗಿ ಇರಬೇಕಾದ ಪದರ ಕ್ಷೀಣಿಸುತ್ತಿದೆ. ಅದಕ್ಕಾಗಿ ನಾವು ಅತಿಯಾದ ಸಿಎಫ್‍ಸಿ, ಎಚ್‍ಎಫ್‍ಸಿಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.
ಓಜೋನ್ ಪದರಕ್ಕೆ ಹಾನಿಯಾದರೆ ತಮಗೆ ಬದುಕಿಲ್ಲ ಎನ್ನುವುದರ ಅರಿವು ಪ್ರತಿಯೊಬ್ಬರಿಗೂ ಆಗಬೇಕಾಗಿದೆ. ಓಜೋನ್ ಪದರ ಉಳಿಸಿ ಅಭಿಯಾನದ ಒಂದು ಭಾಗವೇ ವಿಶ್ವ ಓಜೋನ್ ದಿನಾಚರಣೆಯಾಗಿದೆ. ಪ್ರತಿ ವರ್ಷ ಸೆ. 16ರಂದು ವಿಶ್ವ ಓಜೋನ್ ಡೇ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಓಜೋನ್ ಪದರವು ಸೂರ್ಯನಿಂದ ಬರುವ ಹೇರಳಾತೀತ ಕಿರಣಗಳು ಭೂಮಿಯನ್ನು ತಲುಪದಂತೆ ಫಿಲ್ಟರ್ ಮಾಡುತ್ತದೆ. ಒಂದು ವೇಳೆ ಓಜೋನ್ ಪದರ ಇಲ್ಲದೇಹೋಗಿದ್ದರೆ ಸೂರ್ಯನಿಂದ ಹೊರಟ ಹೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಚರ್ಮದ ಕ್ಯಾನ್ಸರ್, ಅಂಧತ್ವ ಸೇರಿದಂತೆ ಅನೇಕ ಅಪಾಯಗಳನ್ನು ಉಂಟುಮಾಡುತ್ತಿದ್ದವು. ನಿಧಾನವಾಗಿ ಭೂಮಿಯ ಮೇಲಿನ ಜೀವ ಸಂಕುಲ ನಾಶಕ್ಕೆ ನಾಂದಿಯಾಡುತ್ತಿದ್ದವು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss