ಮಂಡ್ಯ : ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಐದು ವಿಭಾಗಗಳಿಗೆ 2ನೇ ಬಾರಿ ಶ್ರೇಣಿ-1 ವರ್ಗದಲ್ಲಿ ಐದು ಸ್ನಾತಕಪೂರ್ವ ಕೋರ್ಸ್ಗಳ ಮಾನ್ಯತೆಯನ್ನು ವಿಸ್ತರಣೆ ಮಾಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ ತಿಳಿಸಿದರು.
ಸಿವಿಲ್, ಮೆಕ್ಯಾನಿಕಲ್. ಎಲೆಕ್ಟ್ರಾನಿಕ್ಸ್ ಅಂಡ್ ಕಂಪ್ಯೂಟರ್ ಸೈನ್ಸ್ ಹಾಗೂ ಆಟೋಮೊಬೈಲ್ ಸೇರಿದಂತೆ ಐದು ವಿಭಾಗಗಳಿಗೆ ಮತ್ತೆ ಪುನ್ ರಾಷ್ಟ್ರೀಯ ಮಾನ್ಯತೆ ವಿಸ್ತರಣೆಯಾಗಿದೆ ಎಂದು ವಿವರಿಸಿದರು.
ಮಾನ್ಯತಾ ತಜ್ಞರ ಸಮಿತಿಯು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ನವೀಕರಣವನ್ನು ಪರಿಶೀಸಿಲಿಸಿಕೊಂಡು ಹೋಗಿತ್ತು. ರಾಷ್ಟ್ರೀಯ ಮಂಡಳಿಯ ಮಾನ್ಯತೆ ಪಡೆಯುವ ಎಲ್ಲಾ ಮಾನದಂಡಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಮತ್ತೆ ರಾಷ್ಟ್ರೀಯ ಮಾನ್ಯತೆ ವಿಸ್ತರಿಸಿದೆ ಎಂದರು.