Latest Posts

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಮಂಡ್ಯ| ಬಾರದ ಜನ: ಗ್ರಾಹಕರಿಗಾಗಿ ಕಾದ ವ್ಯಾಪಾರಸ್ಥರು

sharing is caring...!

ಮಂಡ್ಯ : ಕೋವಿಡ್-19 ಹಿನ್ನಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಡೇ ಲಾಕ್‍ಡೌನ್ ತೆರವುಗೊಂಡ ಬಳಿಕ ವ್ಯಾಪಾರ ವಹಿವಾಟು ಸಹಜಸ್ಥಿತಿಗೆ ಬರುತ್ತದೆ ಎಂದು ನಂಬಿದ್ದ ವ್ಯಾಪಾರಸ್ಥರಿಗೆ ನಿರಾಶೆ ಕಾದಿತ್ತು. ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು ತೆರೆದು ಗ್ರಾಹಕರಿಗೆ ಕಾದು ಕುಳಿತಿದ್ದರು.

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಜನತೆ ಮನೆಯಿಂದ ಹೊರಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ. ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಪೇಟೆ ಬೀದಿ, ಜೈನರ ಬೀದಿ, ವಿ.ವಿ. ರಸ್ತೆ, ಗುತ್ತಲು ರಸ್ತೆ, ಆರ್.ಪಿ. ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಜನರಿಲ್ಲದೆ ಬಣಗುಡುತ್ತಿದ್ದವು.

ಸದಾ ಒತ್ತಡ ಸಂಚಾರವಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಅಲ್ಲೊಂದು ಇಲ್ಲೊಂದು ಸಾರಿಗೆ ಬಸ್‍ಗಳು ಮಾತ್ರ ಸಂಚರಿಸುತ್ತಿದ್ದವು. ಸರಕು ಸಾಗಾಣಿಕೆ ವಾಹನಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಸಂಚಾರವೂ ಕಡಿಮೆಯಾಗಿತ್ತು.

ಕೆಲವು ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ಸ್ವ ಇಚ್ಚೆಯಿಂದಲೇ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಭಾನುವಾರದ ರಿಲ್ಯಾಕ್ಸ್‍ನಲ್ಲಿದ್ದರೆ, ಕೆಲವು ಅಂಗಡಿಗಳು ವ್ಯಾಪಾರ ವಹಿವಾಟಿಗಾಗಿ ತೆರೆದಿದ್ದವು. ಆದರೆ ಸಾರ್ವಜನಿಕರು ಬಾರದ ಕಾರಣ ಪೆಚ್ಚು ಮೋರೆ ಹಾಕಿಕೊಂಡು ಕುಳಿತಿದ್ದುದು ಕಂಡುಬಂತು.

ಕಳೆದ ಎರಡು ದಿನಗಳ ಹಿಂದೆಯಷ್ಟೇ ವರಮಹಾಲಕ್ಷ್ಮೀ ಹಬ್ಬ ಹಾಗೂ ಮುಸ್ಲೀಮರು ನಿನ್ನೆ ಬಕ್ರೀದ್ ಆಚರಿಸಿ ವಿಶ್ರಾಂತಿ ಪಡೆಯುತ್ತಿದ್ದರೆ, ಸರ್ಕಾರಿ ನೌಕರರು ಎರಡು ದಿನಗಳ ರಜೆಯ ಮಜವನ್ನು ಅನುಭವಿಸುತ್ತಿದ್ದುದು ಕಂಡುಬಂತು.

ಹೆದ್ದಾರಿ ಮತ್ತು ಸಂಪರ್ಕ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಇಲ್ಲದ ಕಾರಣ ಸರಕು ಸಾಗಾಣಿಕೆ ವಾಹನಗಳು, ಲಾರಿಗಳು ಮಾತ್ರ ಸ್ವತಂತ್ರವಾಗಿ ಸಂಚಾರಿಸುತ್ತಿದ್ದರೆ, ಹಣ್ಣು ಮತ್ತು ತರಕಾರಿ ಅಂಗಡಿಗಳು, ಔಷಧಿ ಅಂಗಡಿಗಳು, ಸಣ್ಣ ಪ್ಟುಟ ಚಿಲ್ಲರೆ ಅಂಗಡಿಗಳು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದರೆ, ಸಗಟು ವ್ಯಾಪಾರಿಗಳು ಮಾತ್ರ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಬೆಳಗಿನಿಂದಲೇ ಮೋಡಕವಿದ ವಾತಾವರಣವಿದ್ದು, ಆಗೋಮ್ಮೆ ಈಗೊಮ್ಮೆ ಸೂರ್ಯ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದ್ದ. ತಣ್ಣನೆಯ ವಾತಾವರಣ ಇದ್ದ ಕಾರಣ ಜನತೆ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದರು. ಮಳೆ ಬರುವ ಮುನ್ಸೂಚನೆಯೂ ಇದಕ್ಕೆ ಇಂಬು ನೀಡಿತ್ತು.

Latest Posts

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

Don't Miss

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...
error: Content is protected !!