Wednesday, June 29, 2022

Latest Posts

ಮಂಡ್ಯ| ಭಾರತೀಯ ಸೇನಾ ದಿನ: ನಿವೃತ್ತ ಸೈನಿಕರಿಗೆ ಅಭಿನಂದನೆ

ಹೊಸದಿಗಂತ ವರದಿ,ಮಂಡ್ಯ:

ದೇಶದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸೈನಿಕರು ಮತ್ತು ಅವರ ಕುಟುಂಬದ ತ್ಯಾಗವನ್ನು ನಾಗರೀಕರು ಮರೆಯಬಾರದು ಎಂದು ಡಿ.ದೇವರಾಜು ಅರಸು ಹಿಂದುಳಿದವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.

ನಗರದ ಚಾಂಮುಂಡೇಶ್ವರಿ ಬಡಾವಣೆಯಲ್ಲಿ ಬದುಕು ಬೆಳಕು ಸೇವಾ ಸಮಿತಿ ಮತ್ತು ಗಾಣಿಗ ಸಾಹು ಚೌಾಲ್ ಸಂಘಟನೆ ಆಯೋಜಿಸಿದ್ದ ಭಾರತೀಯ ಸೇನಾ ದಿನ ಪ್ರಯುಕ್ತ ನಿವೃತ್ತ ಸೈನಿಕರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ರಕ್ಷಣೆಗೆ ಅಪಾರ ತ್ಯಾಗ, ಬಲಿದಾನ ಹಾಗೂ ಸೇವೆ ಮಾಡಿದ ತಮ್ಮ ಯೋಧರನ್ನು ನೆನೆದುಕೊಳ್ಳುವ ದಿನ ಭಾರತೀಯ ಸೇನಾ ದಿನವಾಗಿದೆ, ದೇಶಸೇವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರಯೋಧರನ್ನು ಗೌರವದಿಂದ ಸ್ಮರಿಸೋಣ. ನಮ್ಮ ಸೈನಿಕರು, ನಿವೃತ್ತ ಯೋಧರು ಮತ್ತು ಅವರ ಕುಟುಂಬಗಳಿಗೆ ದೇಶ ಸದಾ ಆಭಾರಿಯಾಗಿದೆ ಎಂದು ಗೌರವ ನುಡಿಗಳನ್ನಾಡಿದರು.

ಯಾವುದೇ ವಿಪತ್ತಿನ ಸಂದರ್ಭದಲ್ಲೂ ದೇಶ ಸೇವೆಗಾಗಿ ಸನ್ನದ್ಧರಾಗಿ ನಿಲ್ಲುವ ಸೈನಿಕರ ಶೌರ್ಯ,ಸಾಹಸ ಯಾವುದೇ ವರ್ಣನೆಗೆ, ಹೋಲಿಕೆಗಳಿಗೆ ನಿಲುಕದ್ದು. ಅವರ ಸೇವೆಗೆ ಪ್ರತಿಯೊಬ್ಬರ ಸಲಾಂ ಲಭಿಸುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss