ಮಂಡ್ಯ: ಮಹಡಿ ಮೇಲಿಂದ ಬಿದ್ದು 3 ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ನಗರದ ರಾಜಕುಮಾರ್ ಬಡಾವಣೆಯಲ್ಲಿ ರಾತ್ರಿ ನಡೆದಿದೆ.
ಬಡಾವಣೆಯ ನಿವಾಸಿ, ಆದಿಶಕ್ತಿ ಮೆಡಿಕಲ್ ಸ್ಟೋರ್ನ ಮಾಲೀಕ ಸತೀಶ್-ಶೃತಿ ದಂಪತಿಯ 3 ವರ್ಷದ ಧನುಶ್ರೀ ಮೃತ ಮಗು.
ಭಾನುವಾರ ಸಂಜೆ ಎರಡಂತಸ್ತಿನ ಮಹಡಿ ಮೇಲೆ ಮಗು ಆಟವಾಡುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಧನುಶ್ರೀಯನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದೆ. ಅಂದೇ ಮಗುವಿನ ಅಂತ್ಯಸಂಸ್ಕಾರ ನೆರವೇರಿತು.