Saturday, July 2, 2022

Latest Posts

ಮಂಡ್ಯ| ಮುಕ್ತವಾಗಿ ಮಾತನಾಡುವ ಮೂಲಕ ಆತ್ಮಹತ್ಯೆಯಿಂದ ದೂರಾಗಬಹುದು: ಡಿಸಿ

ಮಂಡ್ಯ: ಸ್ನೇಹಿತರು, ಹಿತೈಷಿಗಳು, ಮನಃಶಾಸ್ತ್ರಜ್ಞರೊಂದಿಗೆ ಮುಕ್ತವಾಗಿ ಮಾತನಾಡುವ ಮೂಲಕ ಖಿನ್ನತೆಗೆ ಒಳಗಾದ ವ್ಯಕ್ತಿಯ ಆತ್ಮಹತ್ಯೆಯಂತಹ ಚಿಂತೆಯನ್ನು ದೂರ ಮಾಡಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮನೋರೋಗ ವಿಭಾಗ, ಮಿಮ್ಸ್ ಸಮುದಾಯ ವೈದ್ಯಕೀಯ ಶಾಸ್ತ್ರ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 8 ಲಕ್ಷ ಜನ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ ಎಂಬುದು ವಿಷಾದದ ಸಂಗತಿಯಾಗಿದೆ. ಬದಲಾದ ವಾತಾವರಣದಲ್ಲಿ ಯುವ ಸಮುದಾಯ ಒಂಟಿತನದಿಂದ ಜೀವನ ಮಾಡುವವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಆತ್ಮಹತ್ಯೆಯಂತಹ ಚಿಂತನೆಗೆ ಒಳಗಾದ ವ್ಯಕ್ತಿಗೆ ಮಾನಸಿಕ ಸ್ಥೈರ್ಯ ತುಂಬಿದಲ್ಲಿ ಖಂಡಿತವಾಗಲೂ ಅದನ್ನು ದೂರಮಾಡಿ ಸಮಾಜದಲ್ಲಿ ಸತ್ಪ್ರಜೆಯನ್ನಾಗಿ ಮಾಡಬಹುದು. ಖಿನ್ನತೆಗೆ ಒಳಗಾದ ವ್ಯಕ್ತಿಗಳು ಇತರರೊಂದಿಗೆ ಮುಕ್ತವಾಗಿ ಮಾತನಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರತೀ ವರ್ಷ ಸೆ. 10ರಂದು ವಿಶ್ವದಲ್ಲೇ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಆತ್ಮಹತ್ಯೆ ನಿಯಂತ್ರಿಸಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದೇ ಇತಹ ಕಾರ್ಯಕ್ರಮಗಳ ಉದ್ದೇಶವಾಗಿದೆ. ಆತ್ಮಹತ್ಯಗೆ ಒಳಗಾಗುವವರು ನಮ್ಮಲ್ಲೇ ನಾವು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಆತ್ಮಹತ್ಯೆ ಹಲವಾರು ಕಾರಣಗಳಿಂದ ಬರುತ್ತದೆ ಪ್ರಮುಖವಾಗಿ ಮನುಷ್ಯ ಸಮಾಜ ಮತ್ತು ಪರಿಸರದೊಂದಿಗೆ ಬೆರತು ಸಂಪರ್ಕವನ್ನು ಕಂಡುಕೊಳ್ಳಬೇಕು ಇಲ್ಲದಿದ್ದರೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಅವರು, ಪುರಂದರದಾಸರು ಹೇಳುವಂತೆ ಮನುಷ್ಯ ಜನ್ಮ ದೊಡ್ಡದು ಇದನ್ನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಾಗಳಿರ ಎಂಬಂತೆ ಪ್ರತಿಯೊಬ್ಬರೂ ಜೀವ ಮತ್ತು ಜೀವನದ ಬಗ್ಗೆ ಚಿಂತಿಸುವುದು ಒಳಿತು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss