ಹೊಸ ದಿಗಂತ ವರದಿ, ಮಂಡ್ಯ:
ಮಂಡ್ಯ ವಿಶ್ವವಿದ್ಯಾಲಯಕ್ಕೆ ಇದೇ ಪ್ರಥಮ ಬಾರಿಗೆ ಕುಲಪತಿಯನ್ನಾಗಿ ಡಾ.ಪುಟ್ಟರಾಜು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಡಾ.ಪುಟ್ಟರಾಜು ಅವರು ಸೋಮವಾರ ಬೆಳಿಗ್ಗೆ ಕಾಲೇಜಿಗೆ ಬಂದು ಅಧಿಕಾರ ಸ್ವೀಕರಿಸಿದರು.
ಡಾ.ಪುಟ್ಟರಾಜು ಅವರು ಬೆಂಗಳೂರಿನ ಪ್ರತಿಷ್ಠಿತ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ತಾಂತ್ರಿಕ ವಿದ್ಯಾಲಯದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಡ್ಯ ವಿವಿಗೆ ಆಗಮಿಸಿದ ಡಾ.ಪುಟ್ಟರಾಜು ಅವರನ್ನು ಕಾಲೆಜಿನ ಪ್ರಾಂಶುಪಾಲ ಡಾ.ಮಹಾಲಿಂಗು ಸೇರಿದಂತೆ ಅಧ್ಯಾಪಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಾಲಿಂಗು ಮಾತನಾಡಿ, ಇದು ಬಾಲಕರ ಸರ್ಕಾರಿ ಕಾಲೇಜು ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ ಇಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಿದ್ದು, ಒಟ್ಟಾರೆ 4 ಸಾವಿರ ವಿದ್ಯಾರ್ಥಿಗಳ ಸಾಮಥ್ರ್ಯ ಹೊಂದಿದೆ. ಪ್ರಪ್ರಥಮವಾಗಿ ಸ್ವಾಯತ್ತತೆ ಪಡೆದು ಮೂರು ಅವಧಿಯನ್ನು ಪೂರೈಸಲಾಗಿದೆ. 2005-06ರಲ್ಲಿ ನ್ಯಾಕ್ ನಿಂದ ಬಿಪ್ಲಸ್, ಎ ದರ್ಜೆ, ಮೂರನೇ ಅವಧಿಯಲ್ಲಿಯೂ ಎ ದರ್ಜೆ ಹೀಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಉನ್ನತ ದರ್ಜೆಗೇರುವ ಉಪಕ್ರಮಗಳಾಗಿವೆ. ಕಳೆದ ಮೇ 25ರಂದು ವಿವಿಗೆ ವಿಶೇಷಾಧಿಕಾರಿಯನ್ನು ನೇಮಕಗೊಳಿಸಿತ್ತು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಬಿ.ಸಿ.ರವಿ, ಮಧುಸೂಧನ್, ಡಾ.ಲಿಂಗರಾಜು, ಜಗಧೀಶ್, ಡಾ.ಗಣೇಶ್, ಶ್ರೀನಿವಾಸ್, ಪ್ರಸನ್ನಕುಮಾರ್, ಬಿ.ಆರ್.ಕುಮಾರ್, ದೇವರಾಜು, ತೇಜಸ್ವಿನಿ, ರಮ್ಯ, ಶಿಲ್ಪ, ಸಿದ್ದಪ್ಪಾಜಿ ಬೋಧಕೇತರ ವರ್ಗದ ಗಿರೀಶ್, ದರ್ಶನ್, ಚಂದ್ರು, ಶಿಲ್ಪ, ವಿನಯ್ಕುಮಾರ್ ಮತ್ತಿತರರು.