Wednesday, August 17, 2022

Latest Posts

ಮಂಡ್ಯ| ವಿಷ ಸೇವಿಸಿ ಮಿಮ್ಸ್ ಸೆಕ್ಯೂರಿಟಿ ಸೂಪರ್ ವೈಸರ್ ಆತ್ಮಹತ್ಯೆಗೆ ಯತ್ನ

ಮಂಡ್ಯ: ಮಿಮ್ಸ್ ನಲ್ಲಿ ಸೆಕ್ಯುರಿಟಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ತಾಲ್ಲೂಕಿನ ಅಂಕಣದೊಡ್ಡಿ ಗ್ರಾಮದ ಪಂಚಲಿಂಗೇಗೌಡ(೩೮) ಎಂಬುವರೇ ಮಂಡ್ಯ ಸಮೀಪದ ಗೋಪಾಲಪುರದ ಬಳಿ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಮಿನಾಶಕ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಕರು ವಿಷಯ ತಿಳಿದು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಇವರು ಸೆಕ್ಯುರಿಟಿ ಸೂಪರ್ ವೈಸರ್ (ಮೇಲ್ವಿಚಾರಕ) ಆಗಿ ಸುಮಾರು ಐದು ವರ್ಷಗಳಿಂದ ಮಿಮ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಸಂಬಂಧಪಟ್ಟ ಸೆಂಟ್ರಲ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಆಗಮಿಸಿ ವೈದ್ಯರ ಹೇಳಿಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪಂಚಲಿಂಗೇಗೌಡ ಅವರಿಗೆ ಪ್ರಜ್ಞೆ ಇರಲಿಲ್ಲ. ಪ್ರಜ್ಞೆ ಬಂದ ನಂತರ ವಿಷಯ ತಿಳಿಸಿ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಪೊಲೀಸರು ಹೇಳಿ ಹೊರಟಿದ್ದಾರೆ.
ಕ್ಯಾಂಪಸ್‌ನಿಂದ ಹೊರಗಡೆ ನಡೆದಿರುವ ಘಟನೆಯಾಗಿದ್ದರಿಂದ ನಾವು ಮೊದಲು ಚಿಕಿತ್ಸೆಗೆ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪಂಚಲಿಂಗೇಗೌಡ ಅವರ ಸಂಬಂಧಿಕರಾಗಲೀ ಅಥವಾ ಸ್ನೇಹಿತರಾಗಲಿ ದೂರು ದಾಖಲಿಸಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!