Tuesday, July 5, 2022

Latest Posts

ಮಂಡ್ಯ| ವೈರ್ ಸಿಪ್ಪಿ ಸುಲಿಯುವ ಯಂತ್ರ ಸೇರಿ ಇತರ ನವೀನ ತಾಂತ್ರಿಕ ಯೋಜನೆಗಳಿಗೆ ಚಾಲನೆ

ಮಂಡ್ಯ: ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2019-20ರ ಶೈಕ್ಷಣಿಕ ವರ್ಷದಲ್ಲಿ ಕೈಗೊಳ್ಳಲಾದ ನವೀನ ತಾಂತ್ರಿಕ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಡೀನ್ ಡಾ.ಬಿ.ಎಸ್.ಶಿವಕುಮಾರ್ ಮಾತನಾಡಿ, ವೈರ್ ಸಿಪ್ಪೆ ಸುಲಿಯುವ ಯಂತ್ರದ ವಿನ್ಯಾಸದಿಂದ ಹಳೆಯ ವೈರ್‍ನಿಂದ ಕಾಪರ್ ಬೇರ್ಪಡಿಸಿ, ಮತ್ತೆ ಬಳಕೆ ಮಾಡುತ್ತೇವೆ. ಹಿಂದೆ ಮನುಷ್ಯರೇ ಬಹಳ ಪರಿಶ್ರಮದಿಂದ ಮಾಡುತ್ತಿದ್ದರು. ಈಗ ಯಾಂತ್ರೀಕೃತವಾಗಿ ಮಾಡುತ್ತಿದ್ದು, ಪರಿಶ್ರಮ ಕಡಿಮೆಯಾಗಲಿದೆ ಎಂದು ಹೇಳಿದರು.
ಎಂಟೆಕ್ ವಿದ್ಯಾರ್ಥಿನಿ ಎಂ.ಎಸ್.ಅರ್ಪಿತಾ ಮಾತನಾಡಿ, ಎಂಎಫ್‍ಸಿಸಿ ವೈಶಿಷ್ಟ್ಯಗಳ ಆಧಾರದ ಮೇಲೆ ಯಂತ್ರ ಕಲಿಕೆಯನ್ನು ಬಳಸಿಕೊಂಡು ಧ್ವನಿ ಅಸ್ಪಷ್ಟತೆ ಪತ್ತೆ ಮಾಡುವ ಯಂತ್ರವನ್ನು ಆವಿಷ್ಕರಿಸಿದ್ದು, ಮಾನವನ ಧ್ವನಿ ಪೆಟ್ಟಿಗೆಯಿಂದ ಮೂಡುವ ಮಾತಿನ ಗುಣಮಟ್ಟವನ್ನು ತಿಳಿಯಬಹುದಾಗಿದೆ. ಕಾಯಿಲೆ ಬಂದ ಸಂದರ್ಭದಲ್ಲಿ ಧ್ವನಿ ಬದಲಾವಣೆಯನ್ನು ಗುರುತಿಸಬಹುದಾಗಿದೆ ಎಂದರು.
ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕಣ್ಣಿನ ಸನ್ನೆಗಳಿಂದ ಉತ್ಪತ್ತಿಯಾದ ಮೋರ್ಸ್ ಕೋಡ್ ಬಳಸಿ ದೃಷ್ಟಿ ಆಧಾರಿತ ಪಠ್ಯ ನಮೂದು, ಯಂತ್ರ ಕಲಿಕೆ ವಿಧಾನಗಳನ್ನು ಬಳಸಿಕೊಂಡು ಬೆಳೆ ಭವಿಷ್ಯ, ಬ್ರೈನ್ ವೇವ್ ನಿಯಂತ್ರಿತ ಸ್ವಯಂಚಾಲಿತ ಗಾಲಿಕುರ್ಚಿ, ಯಂತ್ರ ಕಲಿಕೆಯನ್ನು ಬಳಸಿಕೊಂಡು ತ್ರಿಡಿ ಹೊಲೊಗ್ರಾಫಿಕ್ ಮತ್ತು ಸಂಚಾರ ವಿಶ್ಲೇಷಣೆ ಕುರಿತ ಮಾದರಿಗಳನ್ನು ಪ್ರದರ್ಶನ ಮಾಡಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಎಂ.ಸಿ.ಪದ್ಮಾ, ಡಾ.ನಾಗರತ್ನ ಇತರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss