Saturday, August 13, 2022

Latest Posts

ಮಂಡ್ಯ| ಸೇವಾ ಮನೋಭಾವ ಬೆಳಸಿಕೊಂಡರೆ ಬದುಕು, ಜೀವಿತಾವಧಿ ಪರಿಗಣನೆ

ಹೊಸದಿಗಂತ ವರದಿ,ಮಂಡ್ಯ:

ಎಷ್ಟು ವರ್ಷ ಬದುಕಿದ್ದರು ಎಂಬುದು ಮುಖ್ಯವಾಗುವುದಿಲ್ಲ, ಬದಲಿಗೆ ಸೇವಾ ಮನೋಭಾವೆಷ್ಟು ಬೆಳೆಸಿಕೊಂಡು ತೊಡಗಿಸಿಕೊಂಡಿದ್ದಾರೆ ಎಂಬುದು ಗಣನೆಗೆ ಬರಬೇಕು. ನೊಂದವರಿಗೆ ಸಹಾಯ ಮಾಡಬೇಕು. ಆಗಮಾತ್ರ ಬದುಕು ಮತ್ತು ಜೀವಿತಾವಧಿ ಪರಿಗಣೆನೆಗೆ ಬರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ವರದರಾಜು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಾವಿದ್ಯಾಲಯದ ಎವಿಆರ್ ಸಭಾಂಗಣದಲ್ಲಿ ಮಂಡ್ಯ ವಿಶ್ವವಿದ್ಯಾಲಯ, ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ), ನೆಲದನಿ ಬಳಗ, ಕಲ್ಪವೃಕ್ಷ ಯುವಕರ ಸಂಘದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಅವರ 158ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಯುವದಿನ ಮತ್ತು ಯುವ ಸಪ್ತಾಹ, ಜಿಲ್ಲಾ ಯುವ ಸಂಘ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಉತ್ತಮ ಜ್ಞಾನ ಸಂಪಾದಿಸಿ ವಿಶ್ವಕ್ಕೆ ಜ್ಞಾನದ ಅರಿವು ಮೂಡಿಸಿದ್ದ ಮಹನೀಯರೆಂದರೆ ಅದು ಸ್ವಾಮಿ ವಿವೇಕಾನಂದರು ಮಾತ್ರ. ಅವರ ಬದುಕು ಮತ್ತು ಜೀವಿತಾವಧಿ ಪರಿಗಣನೆಗೆ ಬರುತ್ತದೆ. ಸ್ವಾಮಿ ವಿವೇಕಾನಂದ ಅವರು ಬೋಧಿಸಿರುವ ತತ್ವಗಳನ್ನು ಪರಿಪಾಲಿಸುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.

ಪ್ರತಿ ಗ್ರಾಮಗಳಲ್ಲಿ ಓದುವ ಹವ್ಯಾಸವನ್ನು ಯುವ ಜನರು ಮೂಡಿಸಬೇಕು. ಸ್ವಾಮಿ ವಿವೇಕಾನಂದ ಅವರು ಬೋಸಿರುವ ತತ್ವಗಳನ್ನು ಪರಿಪಾಲಿಸಬೇಕು. ನನ್ನ ಧರ್ಮವೇ ಶ್ರೇಷ್ಠ ಎಂಬುದು ಅತ್ಯಂತ ಬಾಲಿಶ ಮತ್ತು ಮೂರ್ಖತನದ ಪರಮಾಧಿಕಾರವಾಗಿದೆ. ಸ್ವಾಮಿ ವಿವೇಕಾನಂದ ಅವರು ಹೇಳಿರುವಂತೆ ಪ್ರತಿ ಧರ್ಮವನ್ನು ಗೌರವಿಸುವುದು ಅಲ್ಲಿನ ಉತ್ತಮ ಸಂದೇಶಗಳನ್ನು ಜೀವನದಲ್ಲಿ ಪಾಲಿಸುವುದು ಆದ್ಯ ಕರ್ತವ್ಯವಾಗಬೇಕು. ಜತೆಗೆ ಅನ್ಯ ಧರ್ಮೀಯರನ್ನು ಗೌರವಿಸಿ ನಮ್ಮ ಸಂಸ್ಕೃತಿ ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss