Sunday, January 24, 2021

Latest Posts

ಮಕರ ಸಂಕ್ರಾಂತಿಗೆ ಕನ್ನಡದಲ್ಲೇ ಶುಭಕೋರಿದ ಟಾಲಿವುಡ್​ ಬೆಡಗಿ ಅನುಷ್ಕಾ ಶೆಟ್ಟಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ತಮ್ಮ ನಟನೆ ಮೂಲಕ ಟಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಮಕರ ಸಂಕ್ರಾಂತಿಯ ದಿನವಾದ ಇಂದು ಕನ್ನಡದಲ್ಲೇ ಎಲ್ಲರಿಗೂ ಶುಭ ಕೋರಿದ್ದಾರೆ.
ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶುಭಕೋರಿದ ಅನುಷ್ಕಾ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದು,ಅದರಲ್ಲೂ ಕನ್ನಡ ಪ್ರೇಮ ಮೆರೆದಿರುವುದಕ್ಕೆ ಕನ್ನಡಿಗರು ಖುಷಿ ಪಟ್ಟಿದ್ದಾರೆ.
ಟಾಲಿವುಡ್​ನಲ್ಲಿ ತಮ್ಮ ನಟನೆಯ ಮೂಲಕ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅನುಷ್ಕಾ ಶೆಟ್ಟಿ ಇದೀಗ , ‘ನಿಶ್ಯಬ್ಧಂ’ ಸಿನಿಮಾದ ನಂತರ ಒಂದಷ್ಟು ಕಥೆಗಳನ್ನ ಕೇಳುತ್ತಿದ್ದಾರೆ . ಜೊತೆಗೆ ತೆಲುಗಿನ ಸೂಪರ್​ ಸ್ಟಾರ್​ ಮಹೇಶ್​ ಬಾಬು ನಟನೆಯ ‘ಸರ್ಕಾರಿ ವಾರಿ ಪಾಠ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಕೇಳಿ ಬರ್ತಿದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!