ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅದನ್ನು ವಿಡಿಯೋ ಮಾಡಿಕೊಂಡು ಡಾರ್ಕ್ವೆಬ್ ಮೂಲಕ ಮಾರಾಟ ಮಾಡುತ್ತಿದ್ದ ಮಹಿಳೆ ಇದೀಗ ಸಿಬಿಐ ಬಲೆಗೆ ಬಿದ್ದಿದ್ದಾಳೆ.
ಆರೋಪಿ ಮಹಿಳೆ ನೀರಾವರಿ ಇಲಾಖೆಯ ಇಂಜಿನಿಯರ್ ಒಬ್ಬನ ಪತ್ನಿ ಎನ್ನಲಾಗಿದೆ. ಈಕೆ ಕಳೆದ 10 ವರ್ಷದಿಂದ ಇಂತಹದೊಂದು ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
ಚಿತ್ರಕೂಟ, ಹಮಿರ್ಪುರ್ ಹಾಗೂ ಬಾಂದಾ ಜಿಲ್ಲೆಗಳಲ್ಲಿ ಬಡ ಮಕ್ಕಳಿಗೆ ಆಮಿಷ ಒಡ್ಡಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಅದನ್ನು ಫೋಟೋ, ವಿಡಿಯೋ ಮಾಡಿ ಪಾರ್ನ್ ವೆಬ್ ಸೈಟ್ ಗಳಲ್ಲಿ ಮಾರಾಟ ಮಾಡುತ್ತಿದ್ದರು.
5 ವರ್ಷದಿಂದ 16 ವರ್ಷದ ಒಳಗಿನ 50ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಈ ರೀತಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಸಿಬಿಐ ಕಾರ್ಯಾಚರಣೆ ವೇಳೆ ತಿಳಿದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳಿನಲ್ಲಿ ರಾಮ್ಭವನ್ ಎಂಬ ಇಂಜಿನಿಯರ್ ಒಬ್ಬರನ್ನು ಬಂಧಿಸಲಾಗಿತ್ತು. ಈದೀಗ ಈ ಇಂಜಿನಿಯರ್ ಪತ್ನಿಯೂ ಈ ಕೃತ್ಯದಲ್ಲಿ ಶಾಮೀಲಾಗಿರುವುದು ಬಯಲಾಗಿದೆ. ಚಿತ್ರಕೂಟ ನಿವಾಸಿಯಾಗಿರುವ ಇಂಜಿನಿಯರ್ ಈಗಾಗಲೇ ನ್ಯಾಯಾಂಗ ವಶದಲ್ಲಿದ್ದು, ಇದೀಗ ಪತ್ನಿಯನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.