Sunday, June 26, 2022

Latest Posts

ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿ, ಶಾಲಾ ಆವರಣದಲ್ಲಿ ಮರ ಬೆಳೆಸಿ-ಹಾಜಿ ಹುಸ್ಸೇನಸಾಬ ಯಾದವಾಡ

ಕೋಲಾರ: ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿ, ಶಾಲಾ ಆವರಣದಲ್ಲಿ ಗಿಡಮರ ಬೆಳೆಸಲು ಒತ್ತು ನೀಡಿ ಎಂದು ಮುಳಬಾಗಿಲು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸ್ಸೇನ ಸಾಬ ಯಾದವಾಡ ಕರೆ ನೀಡಿದರು.
ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲೆಯ ಹನುಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪರಿಸರ ದಿನದ ಅಂಗವಾಗಿ ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಾನವನ ದುರಾಸೆ,ಸ್ವಾರ್ಥದಿಂದಾಗಿ ಗಿಡಮರಗಳು ನಾಶವಾಗುತ್ತಿದೆ, ಸಮತೋಲನ ಹಾಳಾಗಲು ಇದು ಕಾರಣವಾಗಿದ್ದು, ನಾವಿಂದು ಹೆಚ್ಚು ಗಿಡಮರ ಬೆಳೆಸುವ ಮೂಲಕ ಮುನಿಸಿಕೊಂಡಿರುವ ಪ್ರಕೃತಿಯನ್ನು ಶಾಂತಗೊಳಿಸುವ ಕಾರ್ಯ ಮಾಡಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸುವುದರಿಂದ ಮುಂದಿನ ದಿನಗಳಲ್ಲಿ ಮಾಲಿನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದ್ದು, ಮಕ್ಕಳಿಗೆ ಗಿಡಮರಗಳ ಮಹತ್ವವನ್ನು ತಿಳಿಸಿಕೊಡಿ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎ.ಎನ್. ಕಾಂತಮ್ಮ,  ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತಿದೆ, ಇದರಿಂದ ಆರೋಗ್ಯದ ಮೇಲೆ ದುಷ್ಟರಿಣಾಮವಾಗುತ್ತಿದೆ ಇದನ್ನು ತಪ್ಪಿಸಲು ಹೆಚ್ಚಿನ ಗಿಡಮರ ಬೆಳೆಸಬೇಕು ಎಂದರು.
ವಿಶ್ವದಲ್ಲಿ ಪ್ರಕೃತಿ ಸಮತೋಲನಕ್ಕಾಗಿ ಇರಬೇಕಾದ ಪ್ರಮಾಣದಲ್ಲಿ ಗಿಡಮರಗಳಿಲ್ಲ, ಜನ ಅವುಗಳನ್ನು ಹಾಳು ಮಾಡಿದ್ದಾರೆ, ಮನೆ,ರಸ್ತೆ, ಕೈಗಾರಿಕೆ,ಉರುವಲಿಗಾಗಿ ಮರ ಕಡಿದಿದ್ದೇವೆ ಆದರೆ ಅಷ್ಟೇ ವೇಗದಲ್ಲಿ ನಾವು ಮರಗಳನ್ನು ಬೆಳೆಸುವ ಕಾರ್ಯವನ್ನೂ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಬಿ.ಕೆ.ನಾಗರಾಜ್ ವಹಿಸಿದ್ದು, ಮುಳಬಾಗಿಲು ವಕೀಲರ ಸಂಘದ ಅಧ್ಯಕ್ಷ ಎಂ.ಎಲ್.ವೆಂಕಟೇಶ್, ಕಾರ್ಯದರ್ಶಿ ಕೆ.ಆರ್.ವೇಣುಗೋಪಾಲ್, ಹಿರಿಯವಕೀಲರಾದ ಎಂ.ಪ್ರಭಾಕರ್, ಎನ್.ಸತೀಶ್, ನ್ಯಾಯಾಲಯದ ಆರ್.ಪ್ರಸನ್ನಕುಮಾರ್, ಶಿಕ್ಷಕ ಬಿ.ಎಂ.ಗೋಪಾಲ್  ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss