Sunday, August 14, 2022

Latest Posts

ಮಕ್ಕಳ ಬರ್ಥಡೇ ಪಾರ್ಟಿಗಳ ಮುಖ್ಯ ಆಕರ್ಷಣೆ ಕಪ್ ಕೇಕ್ ಹೀಗೆ ಮಾಡಿ..

ಮಕ್ಕಳ ಬರ್ಥಡೇ ಪಾರ್ಟಿಗಳಲ್ಲಿ ಕಪ್ ಕೇಕ್ ಅಥವಾ ಮಫಿನ್‌ಗೆ ಅಗ್ರಸ್ಥಾನ. ಮಾಮೂಲಿ ಕೇಕ್ ಇದ್ದರೂ ಇಡೀ ಕೇಕ್‌ನ್ನು ತಿನ್ನುವುದೇ ಮಜ. ಅಲ್ಲದೇ ಕಪ್ ಕೇಕ್ ಕಲರ್‌ಫುಲ್ ಆಗಿರುತ್ತದೆ. ಇದರ ಸ್ಪಾಂಜಿ ಟೆಕ್ಸಚರ್ ಎಲ್ಲರೂ ಇದನ್ನು ಇಷ್ಟಪಡುವಂತೆ ಮಾಡುತ್ತದೆ. ಕೆಲವರಿಗೆ ಕೇಕ್ ಇಷ್ಟವಾದರೂ ಅದರ ಕ್ರೀಂ ಹಿಡಿಸುವುದಿಲ್ಲ. ಫ್ಯಾಟ್ ಎಂದು ಅದನ್ನು ತಿನ್ನುವುದಿಲ್ಲ. ಅಂಥವರಿಗೆ ಕಪ್ ಕೇಕ್ ಹೇಳಿ ಮಾಡಿಸಿದಂತಿದೆ. ಇದು ನೋಡಲು ಎಷ್ಟು ಸಿಂಪಲ್ ಆಗಿ ಕಾಣುತ್ತದೋ ಮಾಡಲು ಅಷ್ಟೇ ಸಿಂಪಲ್. ಎಲ್ಲರ ಫೇವರೆಟ್ ಕಪ್ ಕೇಕ್ ಹೇಗೆ ಮಾಡುವುದು ನೋಡೋಣ..
ಈ ಸಾಮಾಗ್ರಿಗಳು 24 ಕಪ್ ಕೇಕ್‌ಗಳಿಗೆ ಸಾಕಾಗುತ್ತದೆ.
ಸಾಮಾಗ್ರಿಗಳು

  • ಕಾಲು ಕೆಜಿ ಮೆಲ್ಟೆಡ್ ಬೆಣ್ಣೆ
  • ಕಾಲು ಕೆಜಿ ಸಕ್ಕರೆ
  • ಕಾಲು ಕೆಜಿ ಮೈದಾ
  • ಒಂದು ಚಿಟಿಕೆ ಉಪ್ಪು
  • ನಾಲ್ಕು ಮೊಟ್ಟೆ
  • ನಾಲ್ಕು ಸ್ಪೂನ್ ಹಾಲು
    ಮಾಡುವ ವಿಧಾನ
  • ಬೆಣ್ಣೆಯನ್ನು ಪಾತ್ರೆಗೆ ಹಾಕಿಕೊಂಡು ಬೀಟ್ ಮಾಡಿಕೊಳ್ಳಿ
  • ಇದಕ್ಕೆ ಸಕ್ಕರೆ ಪುಡಿ,ಹಿಟ್ಟು,ಮೊಟ್ಟೆ,ಉಪ್ಪು ಹಾಕಿ ಮಿಕ್ಸ್ ಮಾಡಿ
  • ಇದನ್ನು ಓವನ್‌ನಲ್ಲಿ ಹದಿನೈದು ನಿಮಿಷ ಬೇಯಿಸಿ
  • ನಂತರ ಎರಡು ನಿಮಿಷ ಕೂಲ್ ಆಗಲು ಬಿಟ್ಟು ಮೇಲೆ ಇಷ್ಟವಿದ್ದರೆ ಕ್ರೀಂ ಬಳಸಬಹುದು ಇಲ್ಲವಾದರೆ ಹಾಗೆಯೂ ತಿನ್ನಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss