Thursday, June 30, 2022

Latest Posts

ಮಕ್ಕಳ ಮುಂದೆ ನೀವು ಹೇಗೆ ಬಿಹೇವ್ ಮಾಡ್ತೀರಾ? ಯಾವುದೇ ಕಾರಣಕ್ಕೂ ಈ 5 ವರ್ತನೆಯನ್ನ ಮಕ್ಕಳಿಗೆ ತೋರಿಸಲೇಬೇಡಿ!

ಮಕ್ಕಳನ್ನು‌ ನೋಡಿದ್ದೀರಾ? ನೀವು ಹೇಳೋದನ್ನೆ ಅವರು ಹೇಳುತ್ತಾರೆ, ನೀವು ಮಾಡೋದನ್ನೆ ಅವರು ಮಾಡುತ್ತಾರೆ. ಒಟ್ಟಾರೆ‌ ನೀವೇ ಅವರ ರೋಲ್ ಮಾಡೆಲ್. ಹಾಗಾದರೆ ರೋಲ್ ಮಾಡೆಲ್ ಹೇಗಿರಬೇಕು? ಪ್ರತಿದಿನ ಮನೆಯಲ್ಲಿ ಎಷ್ಟು ಅಂತ ಒಳ್ಳೆ ಮಾತುಗಳನ್ನೇ ಆಡೋಕೆ ಆಗುತ್ತದೆ. ಎಲ್ಲರೂ ನಾರ್ಮಲ್ ಜನರೇ. ಆದರೆ ಕೆಲವೊಂದು ವಿಷಯಗಳನ್ನು ನಿಗಾ ಇಡೋದು ತುಂಬಾನೆ ಮುಖ್ಯ. ಯಾವ ವಿಷಯಗಳು ಅಂತೀರ? ಇಲ್ಲಿ‌ ನೋಡಿ..

  • ಸುಳ್ಳು: ಪಕ್ಕದ ಮನೆಯವರು ಏನೋ ಕೇಳುತ್ತಾರೆ.‌ಮಕ್ಕಳ ಎದುರಿಗೇ ಸುಳ್ಳು ಹೇಳುತ್ತೀರಿ. ಮಗನನ್ನು ಸ್ಕೂಲ್ ನಿಂದ ಕರೆದುಕೊಂಡು ಬಂದೆ ಅದಕ್ಕೆ ನಿಮ್ಮ‌ಮನೆಗೆ ಬರೋಕಾಗಿಲ್ಲ‌. ಆದರೆ ನೀವು ಮಗನನ್ನು ಸ್ಕೂಲಿಂದ ಕರೆದುಕೊಂಡು ಬಂದಿಲ್ಲ. ಮಗ ಪಕ್ಕದಲ್ಲೇ ಇದ್ದಾಗ ಇಂಥ ಸುಳ್ಳು ಹೇಳದಿರಿ.
  • ಅಮ್ಮನಿಗೆ ಹೇಳ್ಬೇಡ: ಇದು ಎಲ್ಲರಿಗೂ ಅಪ್ಲೇ ಆಗುತ್ತದೆ. ಮಗಳಿಗೆ ಐಸ್ ಕ್ರೀಂ ಕೊಡಿಸುತ್ತೀರಿ. ಇವತ್ತು ಐಸ್ ಕೊಡಿಸಿದ್ದು ಅಮ್ಮನಿಗೆ ಹೇಳ್ಬೇಡ ಎಂದುಬಿಡುತ್ತೀರಿ. ಇದು ನಿಮ್ಮಿಬ್ಬರ ಸೀಕ್ರೆಟ್. ನಿಮ್ಮಿಬ್ಬರ ಬಂಧ ಸ್ಟ್ರಾಂಗ್ ಮಾಡಿಸುವ ವಿಷಯ. ಆದರೆ ಮಕ್ಕಳು ನಮ್ಮ ಪಾರ್ಟ್ನರ್ಸ್ ಗೆ ಸುಳ್ಳು ಹೇಳೋದು. ಅವರಿಂದ ವಿಷಯ ಮುಚ್ಚಿಡುವುದು ನಾರ್ಮಲ್ ಎಂದುಕೊಳ್ಳುತ್ತಾರೆ. ಇದು ತಪ್ಪಲ್ಲ ಎಂದು ಫಿಕ್ಸ್ ಆಗುತ್ತಾರೆ.
  • ಜಾಸ್ತಿ‌ ತಮಾಷೆ ಬೇಡ: ಮಕ್ಕಳಿಗೆ ತಮಾಷೆ ಯಾವುದು, ಸರ್ಕಾಸಮ್ ಯಾವುದು ಗೊತ್ತಾಗುವುದಿಲ್ಲ
    ‌ಪ್ರತಿ ಬಾರಿ ಹೇಳಿದ ಲಿಟರಲಿ ಮೀನಿಂಗ್ ತೆಗೆದುಕೊಳ್ಳುತ್ತಾರೆ. ಹಾಗಾಗಿ ತಮಾಷೆ ಹೆಚ್ಚು ಬೇಡ. ಕೆಲವೊಮ್ಮೆ ಅವರು ಹರ್ಟ್ ಆಗುತ್ತಾರೆ.
  • ಮೊಬೈಲ್ ಬಳಸದಿರಿ: ನೀವು ಏನು ಮಾಡುತ್ತೀರೋ ಅವರಿಗೂ ಅದೇ ಬೇಕು. ಅವರು ಅದನ್ನೇ ಮಾಡುತ್ತಾರೆ. ಅವರಿಗೂ ಮೊಬೈಲ್ ಬೇಕು ಎನಿಸುತ್ತದೆ. ಪುಸ್ತಕದ ಬದಲು ಮಕ್ಕಳು ಮೊಬೈಲ್ ಹಿಡಿಯಲಿ ಎಂಬ ಆಲೋಚನೆ‌ ಇದ್ದರೆ ಮಕ್ಕಳ ಕೈಗೆ ಮೊಬೈಲ್ ಕೊಡಿ.
  • ಎಲ್ಲದಕ್ಕೂ ಸಿಟ್ಟು ಬೇಡ: ಮಕ್ಕಳ ಮುಂದೆ ಎಲ್ಲದಕ್ಕೂ ಸಿಟ್ಟು ಮಾಡಬೇಡಿ. ಅವರು ಅದನ್ನೇ ನೋಡಿ ಕಲಿಯುತ್ತಾರೆ. ಸಿಟ್ಟು ಮಾಡಿದರೆ ಮಾತ್ರ ಬೆಲೆ ಎಂದುಕೊಳ್ಳುತ್ತಾರೆ. ಅದೇ ಮುಂದೆ ಸಮಸ್ಯೆ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss