Saturday, August 13, 2022

Latest Posts

ಮಗಳಿಗೆ ಮಗು ಕರುಣಿಸಿದ ಪಾಪಿ ತಂದೆ: ಪತಿ ವಿರುದ್ದ ಪ್ರಕರಣ ದಾಖಲಿಸಿದ ಪತ್ನಿ

ಕೊಪ್ಪಳ : ಸತತ ಒಂದು ವರ್ಷಗಳಿಂದ ಹೆತ್ತ ಮಗಳಿಗೆ ಲೈಂಗಿಕ ದೌರ್ಜನ್ಯ ಎಸಗಿ ತಂದೆಯೇ ಮಗು ಕರುಣಿಸಿದ ತಲೆ ತಗ್ಗಿಸುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ ಮಗಳನ್ನು ತನ್ನ ಜೊತೆಯಲ್ಲಿ ದನಗಳನ್ನು ಮೇಯಿಸಲು ಕರೆದುಕೊಂಡು ಹೋಗ್ತಾ ಇದ್ದ ತಂದೆ. ಸತತ ಒಂದು ವರ್ಷದಿಂದ ಮಗಳಿಗೆ ಬೆದರಿಕೆ ಹಾಕಿ ಲೈಂಗಿಕತೆಗೆ ಬಳಸಿಕೊಳ್ತಾ ಇದ್ದ. ಆದರೆ ಕಳೆದ ನಾಲ್ಕು ದಿನದ ಹಿಂದೆ‌ ಮಗಳು ತುಂಬಾ ಹೊಟ್ಟೆ ನೋವು ಅಂತಾ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಇದರಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಂದಾಗ ಮಗಳು ಗರ್ಭಿಣಿ ಆದ ವಿಷಯ ಗೊತ್ತಾಗಿದ್ದು, 8 ತಿಂಗಳಲ್ಲಿಯೇ ಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಇದರಿಂದ ನೊಂದ ತಾಯಿ ತನಗೂ ಮತ್ತು ಹೆತ್ತ ಮಗಳಿಗೂ ಮೋಸ ಮಾಡಿ ನೀಚ ಕೃತ್ಯ ಎಸಗಿದ ಪತಿ ಮೇಲೆ ಕ್ರಮ ತೆಗೆದುಕೊಳ್ಳಿ ಅಂತಾ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾಳೆ.‌
ಈ ಕುರಿತಂತೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾಪಿ ತಂದೆಯನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss