Sunday, June 26, 2022

Latest Posts

ಮಗ -ಸೊಸೆಯ ಗಲಾಟೆ ಬಿಡಿಸಲು ಹೋಗಿ ತನ್ನ ಜೀವಕ್ಕೆ ಕುತ್ತು ತಂದ ತಂದೆ!

ಹೊಸ ದಿಗಂತ ವರದಿ, ಪಾಂಡವಪುರ:

ಗಂಡ ಹೆಂಡಿರ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ ತಂದೆಯನ್ನು ಮಗ ತಳ್ಳಿದ ಪರಿಣಾಮ ತಲೆಗೋಡೆಗೆ ಬಡಿದು
ಆತ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಚಿಕ್ಕಮರಳಿ ಗ್ರಾಮದ ಯಜಮಾನ್ ಸಣ್ಣ ಮರಿಗೌಡ (69) ಮೃತ ವ್ಯಕ್ತಿ. ಇವರ ಪುತ್ರ ಮರಿಗೌಡ ಆರೋಪಿಯಾಗಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ವಿವರ 
ಆರೋಪಿ ಮರೀಗೌಡ ಮದ್ಯ ವ್ಯಸನಿಯಾಗಿದ್ದು, ಕುಡಿದು ಬಂದು ಪದೇ ಪದೇತನ್ನ ಹೆಂಡತಿ ಮತ್ತು ಮಕ್ಕಳೊಡನೆ ಜಗಳವಾಡುತ್ತಿದ್ದ. ಇದೇ ವಿಚಾರ ಪೊಲೀಸ್‍ ಠಾಣೆಯವರೆಗೂ ಹೋಗಿ ಗ್ರಾಮದ ಹಿರಿಯ ಮುಖಂಡರ ನೇತೃತ್ವದಲ್ಲಿ ರಾಜಿ ಪಂಚಾಯಿತಿ ಮೂಲಕ ಇತ್ಯಾರ್ಥ ಪಡಿಸಲಾಗಿತ್ತು. ಈ ವೇಳೆ ಕುಡುಕಗಂಡನ ಹೆಸರಿನಲ್ಲಿದ್ದ ಆಸ್ತಿಯನ್ನು ಪತ್ನಿ ಹೆಸರಿಗೆ ವರ್ಗಾಯಿಸಲಾಗಿತ್ತು.ಇದನ್ನು ಸಹಿಸದ ಪತಿ ಮರಿಗೌಡಕುಡಿದು ಬಂದು ಪತ್ನಿಗೆ ಜಗಳವಾಡುವ ಮೂಲಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ಶುಕ್ರವಾರ ರಾತ್ರಿಯೂ ಕುಡಿದು ಜಗಳ ತೆಗೆದಿದ್ದಾನೆ. ಈ ವೇಳೆ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ ತಂದೆ ಸಣ್ಣಮರಿ ಗೌಡನನ್ನು ಬಲವಾಗಿ ತಳ್ಳಿದ್ದರಿಂದ ಆತನ ತಲೆಗೋಡೆಗೆ ಬಡಿದು ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪಾಂಡವಪುರ ಪೊಲೀಸ್‍ ಠಾಣೆಯಲ್ಲಿ ದೂರುದಾಖಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಸೂರಾಮ್ ಪಾಂಡವಪುರ ಪೊಲೀಸ್‍ ಠಾಣೆಗೆ ಭೇಟಿ ನೀಡಿ ಘಟನೆ ಸಂಬಂಧ ಮಾಹಿತಿ ಪಡೆದುಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss