ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ 34 ಮಂದಿ ಕೊರೋನಾ ಸೋಂಕಿನಿಂದ ಬಿಡುಗಡೆಯಾಗಿದ್ದರೆ,ಮಂಗಳವಾರ ಬೆಳಗ್ಗೆ 15ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ವೀರಾಜಪೇಟೆ ತಾಲೂಕಿನ ವಿ.ಬಾಡಗದ 36 ವರ್ಷದ ಪುರುಷ, ನಾತಂಗಾಲದ 30 ವರ್ಷದ ಪುರುಷ, ವೀರಾಜಪೇಟೆಯ ಅರವತ್ತೊಕ್ಲುವಿನ 23 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಕಾವೇರಿ ಲೇಔಟಿನ 24 ಮತ್ತು 22 ವರ್ಷದ ಪುರುಷ, ಬೆಳಗಾವಿಯ ಪೊಲೀಸ್ ಇಲಾಖೆಯ 22 ಮತ್ತು 23 ವರ್ಷದ ಪುರುಷರು, ಮಡಿಕೇರಿ ಆಜಾದ್ ನಗರದ 21 ಮತ್ತು 23 ವರ್ಷದ ಪುರುಷರು,ಕುಶಾಲನಗರದ ಗಂಧದಕೋಟೆಯ 24 ವರ್ಷದ ಇಬ್ಬರು ಪುರುಷರು, ಕೂಡಿಗೆಯ 45 ವರ್ಷದ ಮಹಿಳೆ, ಮಡಿಕೇರಿ ಮುತ್ತಪ್ಪ ದೇವಾಲಯ ಹಿಂಭಾಗದ 38ವರ್ಷದ ಪುರುಷ,ವೀರಾಜಪೇಟೆಯ ಬೆಕ್ಕೆಸೊಡ್ಲೂರುವಿನ 75ವರ್ಷದ ಮಹಿಳೆ,ಬೆಂಗಳೂರಿನ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 756 ಆಗಿದ್ದು ಈ ಪೈಕಿ 470ಮಂದಿ ಗುಣಮುಖರಾಗಿದ್ದಾರೆ.275 ಸಕ್ರಿಯ ಪ್ರಕರಣಗಳಿದ್ದು,11 ಮಂದಿ ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಮರಣ ಪ್ರಕರಣಗಳು ವರದಿಯಾಗಿದೆ.