Wednesday, August 17, 2022

Latest Posts

ಮಡಿಕೇರಿ| ಉದ್ಯಾನವನಗಳನ್ನು ತೆರೆಯಲು ಷರತ್ತು ಬದ್ಧ ಅನುಮತಿ!

ಮಡಿಕೇರಿ: ಸರ್ಕಾರದ ಜೂ. 20 ರ ಆದೇಶದ ಮೇರೆಗೆ ಜಿಲ್ಲೆಗೆ ಅನ್ವಯಿಸುವಂತೆ ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸರ್ಕಾರಿ, ಪುರಸಭೆ ಉದ್ಯಾನವನಗಳನ್ನು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಸರ್ಕಾರಿ, ಪುರಸಭೆ ಉದ್ಯಾನವನದಲ್ಲಿ ಕಡ್ಡಾಯವಾಗಿ ಪಾಲಿಸುವ ಬಗ್ಗೆ ಸಂಬಂಧಪಟ್ಟ ನಗರ ಸಭೆ, ಪಟ್ಟಣ ಪಂಚಾಯತ್‍ಗಳ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!