Friday, July 1, 2022

Latest Posts

ಮಡಿಕೇರಿ| ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ: ಪಿ.ಎಸ್.ಮಚ್ಚಾಡೊ

ಮಡಿಕೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಜೂ. 25 ರಿಂದ ಜುಲೈ 3 ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೊ ಅವರು ತಿಳಿಸಿದ್ದಾರೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ತಲಾ 8 ಹಾಗೂ ಸೋಮವಾರಪೇಟೆ ತಾಲೂಕಿನ 11 ಸೇರಿದಂತೆ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 7,149 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 3,562 ಬಾಲಕರು ಮತ್ತು 3,587 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮಡಿಕೇರಿಯಲ್ಲಿ 2081, ಸೋಮವಾರಪೇಟೆಯಲ್ಲಿ 2895, ವೀರಾಜಪೇಟೆಯಲ್ಲಿ 2173, ಒಟ್ಟು 7,149 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಒಂದು ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಲಾ 2 ಮಾಸ್ಕ್ ಅನ್ನು ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಮೂರು ತಾಲೂಕಿನಲ್ಲಿ ತಲಾ 2 ಮೀಸಲು ಕೇಂದ್ರಗಳಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತಲುಪಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿಯಲ್ಲಿ 408, ವೀರಾಜಪೇಟೆಯಲ್ಲಿ 390, ಸೋಮವಾರಪೇಟೆಯಲ್ಲಿ 380 ಸೇರಿದಂತೆ ಒಟ್ಟು 1178 ಮಂದಿ ಶಾಲಾ ವಾಹನದಲ್ಲಿ ಬರುವ ವಿದ್ಯಾರ್ಥಿಗಳು,ಮಡಿಕೇರಿಯಲ್ಲಿ 600, ವೀರಾಜಪೇಟೆಯಲ್ಲಿ 269, ಸೋಮವಾರಪೇಟೆಯಲ್ಲಿ 1120 ಸೇರಿ ಒಟ್ಟು 1989 ಮಂದಿ ನಡಿಗೆ/ಬೈಸಿಕಲ್‍ನಲ್ಲಿ ಬರುವ ವಿದ್ಯಾರ್ಥಿಗಳು, ಮಡಿಕೇರಿ 535, ವೀರಾಜಪೇಟೆ 580, ಸೋಮವಾರಪೇಟೆ 981 ಸೇರಿ ಒಟ್ಟು 2096 ಮಂದಿ ಪೋಷಕರು ಕರೆತರುವ ಮಕ್ಕಳು, ಮಡಿಕೇರಿ 117, ವೀರಾಜಪೇಟೆ 140, ಸೋಮವಾರಪೇಟೆಯಲ್ಲಿ 110 ಸೇರಿ ಒಟ್ಟು 367 ಮಂದಿ ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳು, ಮಡಿಕೇರಿ 949, ವೀರಾಜಪೇಟೆ 330, ಸೋಮವಾರಪೇಟೆ 240 ಸೇರಿ ಒಟ್ಟು 1519 ಮಂದಿ ಕೆಎಸ್‍ಆರ್‍ಟಿಸಿ ಅಥವಾ ಬಾಡಿಗೆ ವಾಹನದಲ್ಲಿ ಬರುವ ವಿದ್ಯಾರ್ಥಿಗಳಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಮಡಿಕೇರಿಯಲ್ಲಿ 50, ಸೋಮವಾರಪೇಟೆ 58, ವೀರಾಜಪೇಟೆ 22 ವಿದ್ಯಾರ್ಥಿಗಳು ಹೊರ ಜಿಲ್ಲೆ/ ತಾಲೂಕುಗಳಿಂದ ಬಂದಿದ್ದಾರೆ. ಮಡಿಕೇರಿ 19, ಸೋಮವಾರಪೇಟೆ 47 ಮತ್ತು ವೀರಾಜಪೇಟೆಯಿಂದ 60 ವಿದ್ಯಾರ್ಥಿಗಳು ಹೊರ ಜಿಲ್ಲೆ/ ತಾಲೂಕುಗಳಿಗೆ ತೆರಳಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss