Thursday, August 11, 2022

Latest Posts

ಮಡಿಕೇರಿ| ಗಡಿ ಪ್ರದೇಶ ಮಾಕುಟ್ಟಕ್ಕೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ, ಪರಿಶೀಲನೆ

ಮಡಿಕೇರಿ: ಕೊಡಗು- ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಚೆಕ್‌ಪೋಸ್ಟ್‌ಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ ಬಂದೋಬಸ್ತ್ ಬಗ್ಗೆ ಪರಿಶೀಲಿಸಿದರು. ಕೊರೋನಾ ಭೀತಿಯಿಂದ ಕೇರಳಕ್ಕೆ ಸಾಗುವ ಹೆದ್ದಾರಿಯಲ್ಲಿ ಸಂಪರ್ಕ ಬಂದ್ ಮಾಡುವ ದೃಷ್ಟಿಯಿಂದ ರಸ್ತೆಗೆ ಅಡ್ಡಲಾಗಿ ಸುರಿದಿದ್ದ ಮಣ್ಣಿನ ರಾಶಿಯ ಮೇಲೆ ಅಕ್ರಮವಾಗಿ ವಾಹನ ಸಂಚರಿಸಿದ ಜಾಗಕ್ಕೆ ಭೇಟಿ ನೀಡಿದ ಶಾಸಕರು ಗಡಿಯಲ್ಲಿ ಮತ್ತಷ್ಟು ಬಿಗಿ ಬಂದೋಬಸ್ತ್ ಮುಂದುವರೆಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಬಿಜೆಪಿ ಮುಖಂಡ ರಘು ನಾಣಯ್ಯ, ಪೊಲೀಸ್ ಇನ್ಸ್‌ಪೆಕ್ಟರ್ ಕ್ಯಾತೆ ಗೌಡ ಮತ್ತಿತರರು ಇದ್ದರು.
ಕಿಟ್ ವಿತರಣೆ: ವಿರಾಜಪೇಟೆ ವಿಭಾಗ ದಲ್ಲಿ ಟೈಲರ್ ವೃತ್ತಿಯಲ್ಲಿರುವ ಸುಮಾರು ೧೦೮ ಮಂದಿಗೆ ಶಾಸಕ ಕೆ.ಜಿ.ಬೋಪಯ್ಯ ಆಹಾರ ಕಿಟ್‌ಗಳನ್ನು ವಿತರಿಸಿದರು.
ವೀರಾಜಪೇಟೆಯ ಮಿನಿವಿಧಾನಸೌಧದ ಕಿಟ್ ವಿತರಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕೊರೋನಾದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿವೆ. ಬಡವರ್ಗದ ಮೆಕ್ಯಾನಿಕ್, ಟೈಲರ್ಸ್, ಸವಿತಾ ಸಮಾಜ, ಅಕ್ಕಸಾಲಿಗರು, ದೋಬಿಗಳು, ಕುಂಬಾರರು, ಕಮ್ಮಾರರು, ಚಿಂದಿ ಆಯುವವರು ಸೇರಿದಂತೆ ಮನೆ ಕೆಲಸದವರಿಗೆ ಸರ್ಕಾರ ೫ ಸಾವಿರ ಪರಿಹಾರವಾಗಿ ನೀಡಲಿದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ತಹಶೀಲ್ದಾರ್ ಎಲ್.ಎಂ.ನಂದೀಶ್ , ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss