Wednesday, August 10, 2022

Latest Posts

ಮಡಿಕೇರಿ| ತರಕಾರಿ ವಾಹನದಲ್ಲಿ ಗೋಮಾಂಸ ಮಾರಾಟ: ಇಬ್ಬರ ಸೆರೆ, ಓರ್ವ ಪರಾರಿ

ಮಡಿಕೇರಿ: ಸಂತೆ ದಿನವಾದ ಸೋಮವಾರ ಟಿ. ಶೆಟ್ಟಿಗೇರಿಯಲ್ಲಿ ತರಕಾರಿ ಮಾರಾಟದ ವಾಹನದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದೆ.
ಸೋಮವಾರ ಅಪರಾಹ್ನ 3.30 ಗಂಟೆಗೆ ಮಂಜುನಾಥ್ ಎಂಬವರಿಗೆ ಸೇರಿದ ಏಂ-45-ಂ 1255ರ ಟಾಟಾ ಏಸ್ ವಾಹನದಲ್ಲಿ ಸೋಮಶೇಖರ್ ಹಾಗೂ ಬಶೀರ್ ಎಂಬವರೊಂದಿಗೆ ಸೇರಿ ಕೆ.ಆರ್ ನಗರದಿಂದ ಗೊ ಮಾಂಸವನ್ನು ತಂದು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಈ ಸಂದರ್ಭ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಶೀರ್ ತಲೆಮರೆಸಿಕೊಂಡಿರುವುದಾಗಿ ಹೇಳಲಾಗಿದೆ.
ಗೋ ಮಾಂಸ ಮಾರಾಟ ಮಾಡುತ್ತಿರುವಾಗ ಸ್ಥಳೀಯರಾದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ, ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಬಿಜೆಪಿ ಸಾಮಾಜಿಕ ಜಾಲತಾಣದ ಚೆಟ್ಟಂಗಡ ಮಹೇಶ್ ಮಂದಣ್ಣ, ಶೆಟ್ಟಿಗೇರಿ ತಾಲೂಕು ಪಂಚಾಯತಿ ಸದಸ್ಯೆ ಸರೋಜ, ರೈತ ಮುಖಂಡ ಅಪ್ಪಚಂಗಡ ಮೋಟಯ್ಯ, ಬಿಜೆಪಿ ಮುಖಂಡರಾದ ಮಚ್ಚಮಾಡ ಶ್ಯಾಮ್, ಕಟ್ಟೇರ ಮಿಲನ್,ಕಟ್ಟೇರ ನರೇಂದ್ರ ಉತ್ತಯ್ಯ, ಕಟ್ಟೇರ ಬೋಪಣ್ಣ, ಚೊಟ್ಟೆಯಂಡಮಾಡ ಧನಂಜಯ, ಬೊಳ್ಳಜಿರ ಅಯ್ಯಪ್ಪ, ಕರ್ಣಂಡ ಚಲನ್, ಮಚ್ಚಮಾಡ ಮಾಚಯ್ಯ, ಚೊಟ್ಟೆಯಂಡಮಾಡ ಪ್ರಜಾ , ರೈತ ಮುಖಂಡರಾದ ಚೊಟ್ಟೆಯಂಡಮಾಡ ಉದಯ ವಗರೆ, ಚೊಟ್ಟೆಯಂಡಮಾಡ ಉದಯ ನೆಮ್ಮಲೆ, ಮಾಯಣಮಾಡ ರಾಜ, ಚೆಟ್ಟಂಗಡ ಲೋಹಿತ್, ಆಂಡಮಾಡ ಭರತ್, ಚೊಟ್ಟೆಯಂಡಮಾಡ ಶಿವಪ್ಪ ಅವರುಗಳು ಪತ್ತೆ ಮಾಡಿ ಆರೋಪಿಗಳನ್ನು ಹಿಡಿದು ವಾಹನ ಸಹಿತ ಪೊಲೀಸರಿಎ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಶ್ರೀಮಂಗಲ ಪೋಲಿಸರು ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss