Tuesday, August 16, 2022

Latest Posts

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 1.45 ಕೋಟಿ ರೂ.ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಅಪ್ಪಚ್ಚುರಂಜನ್

ಹೊಸ ದಿಗಂತ ವರದಿ, ಮಡಿಕೇರಿ:

ಮಡಿಕೇರಿ ನಗರಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಬಳಿ 1.45ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 2019-20ನೇ ಸಾಲಿನ ಮಳೆಹಾನಿ ಅನುದಾನದಲ್ಲಿ ಮಡಿಕೇರಿ ನಗರಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಮುಂಭಾಗದಿಂದ ಸಾಯಿ ಹಾಕಿ ಮೈದಾನದವರೆಗಿನ 360 ಮೀಟರ್ ಉದ್ದ 9 ಮೀಟರ್ ಅಗಲದ ಕಾಂಕ್ರಿಟ್ ರಸ್ತೆಯನ್ನು 145 ಲಕ್ಷ ರೂ.ನಲ್ಲಿ ನಿರ್ಮಾಣ ಮಾಡಲಾಗಿದ್ದು, ರಸ್ತೆಯ ಒಂದು ಬದಿಯಲ್ಲಿ ಚರಂಡಿ ನಿರ್ಮಾಣ ಸಹ ಮಾಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಸ್ತೆಯ ಎರಡು ಬದಿಯಲ್ಲೂ ಇಂಟರ್‍ಲಾಕ್ ನೆಲಹಾಸುಗಳನ್ನು ಹಾಸಲು ಯೋಜಿಸಲಾಗುವುದು ಹಾಗೂ ನಗರದ ವಿವಿಧ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲಾಗುವುದು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭೆ ಆಯುಕ್ತ ಎಸ್.ವಿ.ರಾಮದಾಸ, ಪ್ರಮುಖರಾದ ಕೆ.ಎಸ್.ರಮೇಶ್, ಮಹೇಶ್ ಜೈನಿ, ಅನಿತಾ ಪೂವಯ್ಯ, ಮನು ಮಂಜುನಾಥ್, ಸವಿತಾ ರಾಕೇಶ್, ಪೂಣಚ್ಚ, ಸತೀಶ್ ಕುಮಾರ್, ವಿಘ್ನೇಶ್, ನವೀನ್ ಪೂಜಾರಿ, ಎಂ.ಕುಮಾರ್, ಅರುಣ್ ಕುಮಾರ್, ನಗರಸಭೆ ಎಇಇ ಎಂ.ಎಸ್.ರಾಜೇಂದ್ರ ಕುಮಾರ್, ಕಿರಿಯ ಅಭಿಯಂತರ ಶಮಂತ್ ಕುಮಾರ್, ಜಿ.ಎಚ್.ನಾಗರಾಜು ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss