ಮಡಿಕೇರಿ:ನಿರ್ಮಾಣ ಹಂತದ ಮನೆಯ ಮೆಟ್ಟಿಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ದಾರುಣ ಘಟನೆ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿ ನಡೆದಿದೆ.
ಅರ್ಜಿ ಪಂಚಾಯತಿ ವ್ಯಾಪ್ತಿಯ ನಿವಾಸಿ ಸಿ.ಎಂ.ಪೂವಯ್ಯ ಅವರ ಪುತ್ರ ಚಂದಪಂಡ ಅನಲ್ ಅಪ್ಪಣ್ಣ (೪೨) ಎಂಬವರೇ ಆಕಸ್ಮಿಕ ಸಾವಿಗೀಡಾದವರು. ಅರ್ಜಿ ಗ್ರಾಮದಲ್ಲಿ ನಿರ್ಮಾಣ ಹಂತದ ಹೊಸ ಮನೆಯ ಕೆಲಸವನ್ನು ನೋಡಿಕೊಂಡು ಬರುವುದಾಗಿ ತೆರಳಿದ್ದರು. ಮಂಗಳವಾರ ಸಂಜೆ ಹೊಸ ಮನೆಯ ಅನತಿ ದೂರದಲ್ಲಿ ಆಟವಾಡುತ್ತಿದ್ದ ಮಕ್ಕಳು ಮನೆಯ ಹತ್ತಿರ ತೆರಳಿದಾಗ ಮನೆಯ ಮೆಟ್ಟಿಲುಗಳ ಮೇಲೆ ಅನಿಲ್ ಅವರು ಮುಗ್ಗರಿಸಿ ಬಿದ್ದಿರುವಂತೆ ಪತ್ತೆಯಾಗಿದ್ದಾರೆ.
ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ನಗರ ಪೊಲೀಸರು ಕುಟುಂಬದವರಿಂದ ಮಾಹಿತಿ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.