Tuesday, June 28, 2022

Latest Posts

ಮಡಿಕೇರಿ: ಬಾಲಚಂದ್ರ ಕಳಗಿ ಹತ್ಯೆ ಆರೋಪಿಗೆ ಗುಂಡಿಕ್ಕಿ ಸಾಯಿಸಿದ ಮುಸುಕುಧಾರಿಗಳು

ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಮುಖಂಡ, ಸಂಪಾಜೆ ಗ್ರಾಮ ಪಂಚಾಯಿತಿ ಹಾಗೂ ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರ ಹತ್ಯೆ ಆರೋಪಿಗಳಲ್ಲಿ ಒಬ್ಬನಾಗಿದ್ದ ಕಲ್ಲುಗುಂಡಿಯ ಸಂಪತ್ ಎಂಬಾತನನ್ನು ಮುಸುಕುಧಾರಿಗಳ ತಂಡವೊಂದು ಗುರುವಾರ ಬೆಳ್ಳಂಬೆಳಗ್ಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಬಾಲಚಂದ್ರ ಕಳಗಿ ಅವರ ಹತ್ಯೆ ಆರೋಪಿ ಸಂಪತ್ ಕೆಲವು ತಿಂಗಳ ಹಿಂದೆ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿದ್ದ. ಎಂದಿನಂತೆ ಕಲ್ಲು ಮತ್ತು ಮರಳು ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಆತ ಸುಳ್ಯದ ಶಾಂತಿ ನಗರದಲ್ಲಿರುವ ರಾಮಕೃಷ್ಣ ಎಂಬವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ. ಬುಧವಾರ ಆತ ಶಾಂತಿನಗರದಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದ್ದು, ಅ.8ರಂದು ಮುಂಜಾನೆ 6.30 ಕ್ಕೆ ಆತ ತನ್ನ ಕಾರಲ್ಲಿ ಹೊರಟು ಹೋಗುತ್ತಿದ್ದಾಗ ಐದಾರು ಮಂದಿ ಮುಸುಕುಧಾರಿಗಳ ತಂಡ ಆತನ ಕಾರನ್ನು ಅಡ್ಡಗಟ್ಟಿದೆ. ಅಪಾಯದ ಸುಳಿವರಿತ ಸಂಪತ್ ಕಾರಿನಿಂದಿಳಿದು ಓಡುತ್ತಿದ್ದಂತೆ ಮುಸುಕುಧಾರಿಗಳು ಕೋವಿಯಿಂದ ಆತನ ಬೆನ್ನಿಗೆ ಗುಂಡಿಕ್ಕಿದ್ದಾರೆಂದು ಹೇಳಲಾಗಿದೆ.

ಗುಂಡೇಟು ತಿಂದ ಆತ ಪಕ್ಕದಲ್ಲಿರುವ ಮನೆಯೊಂದಕ್ಕೆ ಹೊಕ್ಕಾಗ ಅಲ್ಲಿಗೂ ಅಟ್ಟಾಡಿಸಿಕೊಂಡು ಬಂದ ಮುಸುಕುಧಾರಿಗಳು ಮನೆಯೊಳಗೇ ಹೊಕ್ಕು ಮತ್ತೆ ಗುಂಡಿಕ್ಕಿದ್ದಲ್ಲದೆ ಕೋವಿಯಿಂದ ಆತನ ತಲೆಗೆ ಹೊಡೆದಿರುವುದಾಗಿ ತಿಳಿದು ಬಂದಿದೆ.
ಈ ಸಂದರ್ಭ ತಡೆಯಲು ಬಂದ ತಿಮ್ಮಪ್ಪ ಎಂಬವರ ಕೈಗೂ ಮುಸುಕುಧಾರಿಗಳು ಕಡಿದಿರುವುದಾಗಿ ಹೇಳಲಾಗಿದ್ದು, ಗುಂಡೇಟಿನಿಂದ ತೀವ್ರ ಜಖಂಗೊಂಡ ಸಂಪತ್ ಮನೆಯೊಳಗಡೆ ಬಿದ್ದು ಮೃತಪಟ್ಟಿದ್ದಾನೆ

ಸುಳ್ಯ ಸರ್ಕಲ್ ಇನ್ಸ್‍ಪೆಕ್ಟರ್ ನವೀನ್‍ಚಂದ್ರ ಜೋಗಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
ಬಾಲಚಂದ್ರ ಕಳಗಿ ಅವರನ್ನು 2018ರ ಮಾರ್ಚ್‍ನಲ್ಲಿ ಮಡಿಕೇರಿ ಸಮೀಪ ಅವರ ಕಾರಿಗೆ ಲಾರಿ ಡಿಕ್ಕಿಪಡಿಸಿ ಹತ್ಯೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss