ಮಡಿಕೇರಿ: ಬೈಕ್ ಸವಾರರಿಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಪರಿಣಾಮ ಇಬ್ಬರು ತೀವ್ರವಾಗಿ ಗಾಯಾಗೊಂಡಿರುವ ಘಟನೆ ಯಡವನಾಡು ಮೀಸಲು ಅರಣ್ಯ ಸಮೀಪದ ಕಾರೇಕೊಪ್ಪ ಮುಖ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಕೆಂಚಮ್ಮನ ಬಾಣೆಯ ನಿವಾಸಿಗಳಾದ ಕೃಷ್ಣ ಎಂಬವರಿಗೆ ಕಾಲು ಮುರಿದಿದ್ದು, ಕುಶಾಲ ಎಂಬವರ ತಲೆಗೆ ತೀವ್ರ ತರಹದ ಪೆಟ್ಟಾಗಿದೆ.
ಗಾಯಾಳುಗಳಿಬ್ಬರೂ ಕುಶಾಲನಗರದಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ರಾತ್ರಿ ೧೧ರ ಸಮಯದಲ್ಲಿ ಮುಖ್ಯ ರಸ್ತೆಯಲ್ಲೇ ಕಾಡಾನೆ ದಾಳಿ ನಡೆಸಿದೆ. ಸ್ಕೂಟಿಯನ್ನು ತುಳಿದು ಜಖಂಗೊಳಿಸಿದೆ.
ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಡಿ.ಆರ್.ಎಫ್.ಒ. ಮನು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ