ಮಡಿಕೇರಿ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಕೋವಿ ಕಳ್ಳತನ ಮಾಡಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ. ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ, ಮೈಸೂರಿನಲ್ಲಿ ವಾಸ ಮಾಡಿಕೊಂಡಿರುವ ಕೆ.ಎಂ. ಮುತ್ತಣ್ಣ ಎಂಬವರು ಕಳೆದ ಮೂರು ತಿಂಗಳಿನಿಂದ ಚೆನ್ನಯ್ಯನಕೋಟೆ ಮನೆಗೆ ಬಂದಿರಲಿಲ್ಲ. ಮಂಗಳವಾರ ಮೈಸೂರಿನಿಂದ ಚೆನ್ನಯ್ಯನ ಕೋಟೆಯ ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮುತ್ತಣ್ಣ ಹಾಗೂ ಸಹೋದರರು ವಾಸವಿರುವ ಮನೆಯಿಂದ ಕೋವಿಯನ್ನು ಕಳ್ಳತನ ಮಾಡಲಾಗಿದೆ. ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಎಸ್ಬಿಬಿಎಲ್ ಕೋವಿಯನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ ಮುತ್ತಣ್ಣ ಅವರ ಸಹೋದರರ ಕೊಠಡಿಗೂ ನುಗ್ಗಿದ್ದಾರೆ. ಕಳ್ಳರು ಕೋವಿಯೊಂದಿಗೆ ಕಾಡ ತೂಸÀುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮುತ್ತಣ್ಣ ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಆದರೆ ಕಳ್ಳತನ ಯಾವ ದಿನ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.