Wednesday, June 29, 2022

Latest Posts

ಮಡಿಕೇರಿ: ಶುಕ್ರವಾರ ಬೆಳಗ್ಗೆ16 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ 30 ಮಂದಿ ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದು,ಶುಕ್ರವಾರ ಬೆಳಗ್ಗೆ ಹೊಸದಾಗಿ 16 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ಪಿರಿಯಾಪಟ್ಟಣ ನವಿಲೂರಿನ 25 ವರ್ಷದ ಪುರುಷ,ಕುಶಾಲನಗರ ಗುಮ್ಮನಕೊಲ್ಲಿ ಚೌಡೇಶ್ವರಿ ಬಡಾವಣೆಯ 60 ವರ್ಷದ ಮಹಿಳೆ, ಕೂಡುಮಂಗಳೂರು ದೊಡ್ಡತ್ತೂರು ಗ್ರಾಮದ 40ವರ್ಷದ ಮಹಿಳೆ, ಚೆಟ್ಟಳ್ಳಿ ಅಭ್ಯತ್ ಮಂಗಲ ಶ್ರೀಮಂಗಲ ಎಸ್ಟೇಟಿನ 49 ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕೊಡ್ಲಿಪೇಟೆ ಕಟ್ಟೆಪುರದ 39 ವರ್ಷದ ಪುರುಷ, ಮಡಿಕೇರಿ ಕಡಗದಾಳು ಗ್ರೀನ್ಸ್ ವಿಲ್ಲಾದ 42 ವರ್ಷದ ಮಹಿಳೆ,ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಶ್ರೀದೇವಿ ಲೇಔಟ್ ನ 53 ವರ್ಷದ ಪುರುಷ, ಮಾದಾಪುರ ಕಾರೆಕಾಡ್ ಗ್ರಾಮದ 45 ವರ್ಷದ ಪುರುಷ ಮತ್ತು 42ವರ್ಷದ ಮಹಿಳೆ,ಮಾದಾಪುರ ಇಗ್ಗೋಡ್ಲು ಸರ್ಕಾರಿ ಶಾಲೆ ಬಳಿಯ ಜಂಬೂರು ಬಾಣೆಯ 40, 48, 21 ವರ್ಷದ ಮಹಿಳೆಯರು, 21ಮತ್ತು 26ವರ್ಷದ ಪುರುಷರು, ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯ 21 ವರ್ಷದ ಪುರುಷ ಮತ್ತು 51 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1141 ಆಗಿದ್ದು, ಈ ಪೈಕಿ 804 ಮಂದಿ ಗುಣಮುಖರಾಗಿದ್ದಾರೆ. 321 ಸಕ್ರಿಯ ಪ್ರಕರಣಗಳಿದ್ದು, 16 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 269 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss