ಮಡಿಕೇರಿ : ಮಡಿಕೇರಿಯಲ್ಲಿ ನಿರ್ಮಾಣಗೊಂಡಿರುವ ಸುವರ್ಣ ಸಮುಚ್ಛಯ ಭವನಕ್ಕೆ 807 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಪೈಕಿ 307 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ವಿಧಾನ ಮಂಡಲದ ಅಧಿವೇಶದಲ್ಲಿ ಭಾಗಿಯಾಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಿರ್ಮಿಸಲಾಗಿರುವ ಕನ್ನಡ ಭವನಗಳ ಸಂಖ್ಯೆ ಎಷ್ಟು ಹಾಗೂ ಅವುಗಳಿಗೆ 3 ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ ಮತ್ತು ಖರ್ಚಿನ ವಿವರ ನೀಡುವಂತೆ ಸಚಿವರನ್ನು ಕೋರಿದರು.
ಕೊಡಗು ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಒಳಪಟ್ಟಿರುವ 3 ಕಟ್ಟಡ, ಆಸ್ತಿಗಳಿವೆ. ಕಳೆದ 3 ವರ್ಷಗಳಲ್ಲಿ ಸುವರ್ಣ ಸಮುಚ್ಛಯ ಭವನ ಮಡಿಕೇರಿಗೆ 807 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 307 ಲಕ್ಷ ರೂ. ಖರ್ಚಾಗಿದೆ. ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ 275 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಪೂರ್ಣ ಮೊತ್ತ ಖರ್ಚಾಗಿದೆ. ಕುಶಾಲನಗರದ ಕಲಾಭವನಕ್ಕೆ 399.43 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 388.43 ಲಕ್ಷ ರೂ. ಖರ್ಚಾಗಿದೆ ಎಂದು ಸಚಿವ ಸಿ.ಟಿ.ರವಿಮಾಹಿತಿ ನೀಡಿದರು.