ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದು ಮಣಿಪುರ, ತ್ರಿಪುರ ಮತ್ತು ಮೇಘಾಲಯ “ರಾಜ್ಯ ಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಈ ರಾಜ್ಯದ ಜನರಿಗೆ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.
” ಮೇಘಾಲಯದ ಸಹೋದರ ಮತ್ತು ಸಹೋದರಿಯರಿಗೆ ಅವರ ರಾಜ್ಯ ಸ್ಥಾಪನಾ ದಿನಾಚರಣೆಯ ಶುಭಾಶಯಗಳು. ಈ ರಾಜ್ಯ ದಯೆ ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾಗಿದೆ. ಮೇಘಾಲಯದ ಯುವಕರು ಸೃಜನಶೀಲ ಮತ್ತು ಉದ್ಯಮಶೀಲರು. ಮುಂದಿನ ದಿನಗಳಲ್ಲಿ ರಾಜ್ಯವು ಪ್ರಗತಿಯ ಹೊಸ ಎತ್ತರಕ್ಕೆ ಏರಲಿ” ಎಂದು ಆಶಿಸಿದ್ದಾರೆ.
ಮತ್ತೊಂದು ಟ್ವೀಟ್’ನಲ್ಲಿ ‘ತ್ರಿಪುರದ ಜನರ ಸಂಸ್ಕೃತಿ ಮತ್ತು ಆತ್ಮೀಯ ಸ್ವಭಾವವನ್ನು ಭಾರತದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ , ಹೀಗೆ ಮುಂದುವರೆಯಿರಿ ಎಂದು ಹೇಳಿದ್ದಾರೆ. ಹಾಗೇ ಮಣಿಪುರದ ಜನರಿಗಗೂ ರಾಜ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ, ರಾಷ್ಟ್ರೀಯ ಅಭಿವೃದ್ಧಿಗೆ ಭಾರತ ನೀಡಿದ ಕೊಡುಗೆಯ ಬಗ್ಗೆ ಹೆಮ್ಮೆ ಇದೆ. ನಾವೀನ್ಯತೆ ಮತ್ತು ಕ್ರೀಡಾ ಪ್ರತಿಭೆಗಳಿಂದ ರಾಜ್ಯವು ಶಕ್ತಿಶಾಲಿಯಾಗಿದೆ. ಮೇಘಾಲಯದ ಯುವಕರು ಸೃಜನಶೀಲ ಮತ್ತು ಉದ್ಯಮಶೀಲರಾಗಿದ್ದಾರೆ ಎಂದು ಹೇಳಿದ್ದಾರೆ.